ರೈಲ್ವೇ ಟ್ರ್ಯಾಕ್ – ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಮಕ್ಕಳನ್ನು ಸಮಯ ಪ್ರಜ್ಞೆಯಿಂದ ಅದ್ಭುತವಾಗಿ ರಕ್ಷಿಸಿದ ಮಹಿಳೆ

ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ ಮಕ್ಕಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿ ಮುಚ್ಚಿಕೊಂಡು ಮಲಗಿದ್ದಾರೆ.

ಶನಿವಾರ ನಡೆದ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು ವೈರಲ್ ಆಗಿದೆ. ರೈಲು ಕೇವಲ ಇಂಚುಗಳಷ್ಟು ದೂರದಲ್ಲಿ ವೇಗವಾಗಿ ಬರುತ್ತಿದ್ದಾಗ ಮಹಿಳೆ ತಮ್ಮ ಮಕ್ಕಳನ್ನು ಮಲಗಿಸಿ ಅವರನ್ನು ಮುಚ್ಚಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಮಹಿಳೆ ಮತ್ತು ಆಕೆಯ ಮಕ್ಕಳು ವಿಕ್ರಮಶಿಲಾ ಎಕ್ಸ್‌ ಪ್ರೆಸ್‌ನಲ್ಲಿ ಕುಟುಂಬ ಸದಸ್ಯರೊಂದಿಗೆ ಬೇಗುಸರಾಯ್‌ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ರೈಲು ಹತ್ತುವಾಗ ಜನಸಂದಣಿಯಿಂದಾಗಿ ಮಕ್ಕಳೊಂದಿಗೆ ಹಳಿಗಳ ಮೇಲೆ ಬಿದ್ದಿದ್ದಾಳೆ. ಹಳಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದ ಮಹಿಳೆ ಇನ್ನೊಂದು ರೈಲು ಪ್ಲಾಟ್‌ಫಾರ್ಮ್‌ನಿಂದ ಸಾಗುವವರೆಗೂ ತನ್ನ ಮಕ್ಕಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾಳೆ. ರೈಲು ಪಾಸಾದ ನಂತರ ಮಹಿಳೆ ಮತ್ತು ಆಕೆಯ ಮಕ್ಕಳನ್ನು ರಕ್ಷಿಸಲಾಗಿದೆ.

https://twitter.com/smaurya_journo/status/1738816807660834989

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read