ಕೋಪನ್‌ಹೇಗನ್‌ ಸರ್ಕೆಲ್‌ಬ್ರೋನ್ ಸೇತುವೆಯ ಕೌತುಕ: ವಿಡಿಯೋ ವೈರಲ್​

ಪ್ರಪಂಚವು ವಾಸ್ತುಶಿಲ್ಪದ ಅದ್ಭುತಗಳಿಂದ ತುಂಬಿದೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ ರಚನೆಗಳು ಕುತೂಹಲಕಾರಿಯಾಗಿದೆ. ಪ್ರಪಂಚದಾದ್ಯಂತದ ವಾಸ್ತುಶಿಲ್ಪಿಗಳು ಕೆಲವು ಸುಂದರವಾದ ರಚನೆಗಳನ್ನು ರಚಿಸಿರುವುದು ಕೌತುಕ ತರುವಂತಿದೆ.

ಅಂತಹ ಒಂದು ರಚನಾತ್ಮಕ ಮೇರುಕೃತಿಯೆಂದರೆ ಡೆನ್ಮಾರ್ಕ್‌ನ ಕೋಪನ್‌ ಹೇಗನ್‌ನ ಸರ್ಕೆಲ್‌ಬ್ರೋನ್ ಸೇತುವೆ. ಈ ಸೇತುವೆಯ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ನೌಕಾಯಾನ ದೋಣಿಗಳನ್ನು ನೆನಪಿಸುವಂತೆ, ಇಲ್ಲಿ ಐದು ವೃತ್ತಾಕಾರದ ವೇದಿಕೆಗಳಿಂದ ಮಾಡಲ್ಪಟ್ಟಿದೆ, ಪ್ರತಿಯೊಂದೂ ವಿಭಿನ್ನ ಗಾತ್ರ ಹೊಂದಿದೆ. ಪಾದಚಾರಿ ಸೇತುವೆಯ ನಿರ್ಮಾಣವನ್ನು ಡ್ಯಾನಿಶ್ ಫೌಂಡೇಶನ್ ನಾರ್ಡಿಯಾ-ಫೊಂಡೆನ್ ನಿಯೋಜಿಸಿದೆ ಮತ್ತು ಓಲಾಫರ್ ಎಲಿಯಾಸನ್ ವಿನ್ಯಾಸಗೊಳಿಸಿದ್ದಾರೆ.

ಓಲಾಫುರ್ ಅವರು ಐಸ್‌ಲ್ಯಾಂಡ್‌ನಲ್ಲಿ ಹುಟ್ಟಿ ಬೆಳೆದ ಡ್ಯಾನಿಶ್ ಆಗಿರುವುದರಿಂದ ಡ್ಯಾನಿಶ್-ಐಸ್‌ಲ್ಯಾಂಡಿಕ್ ಹಿನ್ನೆಲೆಯಿಂದ ಸ್ಫೂರ್ತಿ ಪಡೆದು ಸೇತುವೆಯನ್ನು ವಿನ್ಯಾಸಗೊಳಿಸಿದ್ದಾರೆ. “ಬೈಸಿಕಲ್‌ಗಳು, ವಾಕರ್‌ಗಳು ಮತ್ತು ದೋಣಿಗಳು ಈ ಸೇತುವೆಯನ್ನು ಏಕಕಾಲದಲ್ಲಿ ದಾಟಬಹುದು!

ಡ್ರೋನ್-ಕ್ಯಾಮೆರಾ ಶಾಟ್ ಮೂಲಕ ವೃತ್ತ ಸೇತುವೆಯ ಕೆಲಸವನ್ನು ನೋಡಬಹುದಾಗಿದ್ದು, ಇದು ಬಹಳ ಕುತೂಹಲಕಾರಿಯಾಗಿದೆ.

ಸೇತುವೆಯು ಒಂದು ಬದಿಯಿಂದ ತೆರೆದುಕೊಳ್ಳುವುದರೊಂದಿಗೆ ಮತ್ತು ದೋಣಿಗಳನ್ನು ಹಾದುಹೋಗಲು ಬಾಗಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ಕೌತುಕಕ್ಕೆ ಜನರು ಮನಸೋತಿದ್ದಾರೆ.

https://twitter.com/TansuYegen/status/1629486618657562624?ref_src=twsrc%5Etfw%7Ctwcamp%5Etweetembed%7Ctwterm%5E1629486618657562624%7Ctwgr%5E0eaf3699d30e1ad40a31bbe6a391a194b094b512%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-walkers-bicycles-and-boats-move-at-once-at-copenhagens-cirkelbroen-7173559.html

https://twitter.com/TansuYegen/status/1629486618657562624?ref_src=twsrc%5Etfw%7Ctwcamp%5Etweetembed%7Ctwterm%5E1629617450193960961%7Ctwgr%5E0eaf3699d30e1ad40a31bbe6a391a194b094b512%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-walkers-bicycles-and-boats-move-at-once-at-copenhagens-cirkelbroen-7173559.html

https://twitter.com/TansuYegen/status/1629486618657562624?ref_src=twsrc%5Etfw%7Ctwcamp%5Etweetembed%7Ctwterm%5E1629606876265545730%7Ctwgr%5E0eaf3699d30e1ad40a31bbe6a391a194b094b512%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-walkers-bicycles-and-boats-move-at-once-at-copenhagens-cirkelbroen-7173559.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read