ಮಾಸ್ಟರ್ ಚೆಫ್ ಇಂಡಿಯಾ ಪ್ರಸಿದ್ಧ ಭಾರತೀಯ ಪಾಕಶಾಲೆಯ ಪ್ರದರ್ಶನವಾಗಿದ್ದು, ಭಾಗವಹಿಸುವವರನ್ನು ಅವರ ಅಡುಗೆ ಕೌಶಲ್ಯದ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಪ್ರದರ್ಶನವು ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಈ ಕಾರ್ಯಕ್ರಮದಂತೆಯೇ, ಪಾಕಿಸ್ತಾನದ ಅಡುಗೆ ಷೋ ‘ದಿ ಕಿಚನ್ ಮಾಸ್ಟರ್’ ಭಾರಿ ಫೇಮಸ್ ಆಗಿದೆ.
ಕಾರ್ಯಕ್ರಮದ ಇತ್ತೀಚಿನ ವಿಡಿಯೋ ಈ ಕಾರ್‍ಯಕ್ರಮದ ತಮಾಷೆಯ ವಿಷಯದಿಂದಾಗಿ ವೈರಲ್ ಆಗಿದೆ. ಸ್ಪರ್ಧೆಗೆ ಬಿರಿಯಾನಿ ತರುವ ಪಾಕಿಸ್ತಾನಿ ಸ್ಪರ್ಧಿಗಳನ್ನು ವಿಡಿಯೋ ತೋರಿಸುತ್ತದೆ. ತೀರ್ಪುಗಾರರು ಬಿರಿಯಾನಿ ಬಗ್ಗೆ ಕೇಳಿ ತಿಳಿದುಕೊಳ್ಳಲು ಉತ್ಸುಕರಾಗಿದ್ದರು.
ಇದರಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬಳ ಬಿರಿಯಾನಿಯಿಂದಾಗಿ ಈ ವಿಡಿಯೋ ವೈರಲ್ ಆಗಿದೆ. ತೀರ್ಪುಗಾರರು ಎಲ್ಲರನ್ನೂ ಪ್ರಶ್ನಿಸುತ್ತಾ ಮಹಿಳೆಯನ್ನು ಆಕೆ ತಂದ ಬಿರಿಯಾನಿ ಬಗ್ಗೆ ಕೇಳಿದರು. ಅದಕ್ಕೆ ಆಕೆ ಇದು ತನ್ನ ಪ್ರದೇಶದಿಂದ ತಂದಿರುವ ಉತ್ತಮವಾದ ಬಿರಿಯಾನಿ ಎಂದಳು. ಆದರೆ ಅಸಲಿಗೆ ಅದನ್ನು ಬೇಯಿಸಿಯೇ ಇರಲಿಲ್ಲ!
ಇದರಿಂದ ತೀರ್ಪುಗಾರರು ಕೋಪಗೊಂಡು ಆಕೆಯನ್ನು ಸ್ಪರ್ಧೆ ಬಿಟ್ಟು ಹೋಗುವಂತೆ ಹೇಳಿದರು. ಆದರೆ ಆಕೆ, ಬಿರಿಯಾನಿ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ, ಇಷ್ಟು ಹೊತ್ತು ತನ್ನ ಸರದಿಗಾಗಿ ಕಾಯುತ್ತಿದ್ದೆ ಎಂದರೂ ಆಕೆಯನ್ನು ಹೊರಕ್ಕೆ ಕಳುಹಿಸಲಾಯಿತು.
https://twitter.com/Amberological/status/1630123386113519618?ref_src=twsrc%5Etfw%7Ctwcamp%5Etweetembe
https://twitter.com/Amberological/status/1630123386113519618?ref_src=twsrc%5Etfw%7Ctwcamp%5Etweetembed%7Ctwterm%5E1630442871726944256%7Ctwgr%5E97b2fad030e90af71cf1a28be65ffc9c34e7df45%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fwatch-viral-clip-from-pakistans-show-the-kitchen-master-netizens-comment-it-is-more-of-a-comedy-show-than-a-cookery-show
https://twitter.com/Amberological/status/1630123386113519618?ref_src=twsrc%5Etfw%7Ctwcamp%5Etweetembed%7Ctwterm%5E1630161032416227328%7Ctwgr%5E97b2fad030e90af71cf1a28be65ffc9c34e7df45%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fwatch-viral-clip-from-pakistans-show-the-kitchen-master-netizens-comment-it-is-more-of-a-comedy-show-than-a-cookery-show