Watch Video | ಬಡ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ; ಪೈಲಟ್ ದಂಪತಿಗೆ ಸ್ಥಳೀಯರಿಂದ ಥಳಿತ

10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೈಲಟ್, ಆಕೆಯ ಪತಿ ಮತ್ತು ವಿಮಾನಯಾನ ಸಿಬ್ಬಂದಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ಅವರ ಮೇಲೆ ಸ್ಥಳೀಯರು ಕಪಾಳಮೋಕ್ಷ ಮಾಡಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ದೃಶ್ಯಗಳಲ್ಲಿ ಪೈಲಟ್ ಅನ್ನು ಕೂದಲು ಹಿಡಿದು ಹಲವು ಮಹಿಳೆಯರ ಗುಂಪು ಎಳೆದಾಡಿದೆ. ಈ ವೇಳೆ ಆಕೆ ಸಹಾಯಕ್ಕಾಗಿ ಕೂಗಾಡ್ತಿದ್ರೆ, ಅತ್ತ ಆಕೆಯ ಪತಿಯ ಮೇಲೆ ಪುರುಷರ ಗುಂಪೊಂದು ಥಳಿಸಿದೆ.

ಮೂಲಗಳ ಪ್ರಕಾರ ದಂಪತಿ ಸುಮಾರು ಎರಡು ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಆಕೆಯ ಸಂಬಂಧಿಯೊಬ್ಬರು ಬಾಲಕಿಯ ಕೈ ಮತ್ತು ಮುಖದ ಮೇಲೆ ಗಾಯದ ಗುರುತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ತಕ್ಷಣವೇ ಸ್ಥಳೀಯರು ಬಾಲಕಿಯನ್ನು ಪೈಲಟ್ ದಂಪತಿ ಥಳಿಸಿ ಹಿಂಸಿಸುತ್ತಾರೆ ಎಂದು ರೊಚ್ಚಿಗೆದ್ದು ಹಲ್ಲೆ ಮಾಡಿದರು.

ನಂತರ ಪೊಲೀಸರು ಸ್ಥಳಕ್ಕಾಗಮಿಸಿ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323, 324, 342 ಮತ್ತು ಬಾಲಕಾರ್ಮಿಕ ಕಾಯ್ದೆ 75 ಜೆಜೆ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.

https://youtu.be/NOsGiClmnTk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read