ಬೆಂಗಳೂರು : ಸುದ್ದಿಗೋಷ್ಟಿ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೆಡಿಎಸ್ ನಾಯಕ , ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಅವರ ಮೂಗಿನಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ್ದಾರೆ.
ರಕ್ತಸ್ರಾವವಾಗುತ್ತಿದ್ದಂತೆ ಸಚಿವರು ರಕ್ತವನ್ನು ಒರೆಸಲು ಪ್ರಯತ್ನಿಸಿದರು, ಆದರೆ ಅದು ಅವರ ಗಲ್ಲದಿಂದ ಇಳಿಯಲು ಪ್ರಾರಂಭಿಸಿತು ಮತ್ತು ನಂತರ ಎಲ್ಲರಿಗೂ ಕಾಣುವಂತೆ ಅವರ ಬಿಳಿ ಅಂಗಿಯ ಮೇಲೆ ಬಿದ್ದಿತು. ಘಟನೆ ಹಿನ್ನೆಲೆ ಎಲ್ಲರೂ ಒಂದು ಕ್ಷಣ ಶಾಕ್ ಆದರು.
ಕೂಡಲೇ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ವೈದ್ಯರು ಚಿಕಿತ್ಸೆ ನೀಡುತ್ತಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
https://twitter.com/i/status/1817546813441990807