ಸತಾರಾ : ಮಹಾರಾಷ್ಟ್ರದ ಸತಾರಾದಲ್ಲಿ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಘಟನೆ ನಡೆದಿದೆ.ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದರಿಂದ ಪವಾಡಸದೃಶವಾಗಿ ಸಾವಿನಿಂದ ಪಾರಾಗಿದ್ದಾರೆ.
ಪುಣೆಯ ಮಹಿಳೆಯೊಬ್ಬರು ಸತಾರಾದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕಾಲು ಜಾರಿ 100 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ.ಮಹಾರಾಷ್ಟ್ರದ ಸತಾರಾದ ಉಂಗರ್ ರಸ್ತೆಯ ಬೋರ್ನ್ ಘಾಟ್ನಲ್ಲಿ ಈ ಘಟನೆ ನಡೆದಿದೆ.
100 ಅಡಿ ಕೆಳಗೆ ಬಿದ್ದರೂ, ಮಹಿಳೆ ಅದೃಷ್ಟವಶಾತ್ ಪ್ರಜ್ಞೆ ಕಳೆದುಕೊಳ್ಳಲಿಲ್ಲ ಮತ್ತು ಸಹಾಯಕ್ಕಾಗಿ ಜೋರಾಗಿ ಕಿರುಚಿದ್ದಾರೆ . ಆಕೆಯ ಧ್ವನಿಯನ್ನು ಕೇಳಿಸಿಕೊಂಡ ಸ್ಥಳೀಯರು ಚಾರಣಿಗರ ಸಹಾಯದಿಂದ ಅವಳನ್ನು ಮೇಲಕ್ಕೆ ಎತ್ತಿದ್ದಾರೆ.
Pune Woman Falls 100Ft While Clicking Selfie, Video Captures Miraculous Rescue
.
.
.#punevideo #viralvideo #republictv pic.twitter.com/l0tFcfuOsd— Republic (@republic) August 4, 2024