ಶಿಕ್ಷಕರ ದಿನಾಚರಣೆಯಂದು ಶಿಕ್ಷಕಿಯೋರ್ವರು ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಮಹಿಳಾ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳ ಮುಂದೆ ಭೋಜ್ಪುರಿ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
ಶಿಕ್ಷಕಿ ಕಪ್ಪು ಸೀರೆ ಉಟ್ಟು ತುಂಬಾ ಹಾಟ್ ಆಗಿ ನೃತ್ಯ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ಅವರ ಸುತ್ತಲೂ ಕುಳಿತು ಸಂತೋಷದಿಂದ ನೋಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕಿ ನೃತ್ಯ ಮಾಡಿದ್ದಾರೆ ಎನ್ನಲಾಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾದ ಈ ವೀಡಿಯೊ ಈಗ ವ್ಯಾಪಕವಾಗಿ ಟೀಕಿಸಲ್ಪಟ್ಟಿದೆ.. ‘ಎಕ್ಸ್’ ಬಳಕೆದಾರರೊಬ್ಬರು ವಿಡಿಯೋಕಾಮೆಂಟ್ ಮಾಡಿದ್ದಾರೆ, “ಇದಕ್ಕಿಂತ ದೊಡ್ಡ ಅವಮಾನ ಯಾವುದು? ಸ್ವತಃ ಶಿಕ್ಷಕಿಯೇ ಅಂತಹ ಹಾಡುಗಳಿಗೆ ನೃತ್ಯ ಮಾಡುತ್ತಾರೆ, ಅದೂ ಶಾಲೆಯಲ್ಲಿ ಶಿಕ್ಷಕರ ದಿನದಂದು!”
ಇನ್ನೊಬ್ಬ ‘ಎಕ್ಸ್’ ಬಳಕೆದಾರರು ಕೇಳಿದರು, “ಈ ರೀತಿಯ ಶಾಲೆಗಳು ಇದ್ದರೆ ಮೌಲ್ಯಗಳು ಎಲ್ಲಿಂದ ಬರುತ್ತವೆ?” ಅಲ್ಲದೆ, ಬಹಳಷ್ಟು ಜನರು ಇದನ್ನು ಪ್ರಶ್ನಿಸುತ್ತಿದ್ದಾರೆ. “ಅದರ ಬಗ್ಗೆ ಯೋಚಿಸಿ.. ಶಿಕ್ಷಣದ ಮಟ್ಟ ಹೇಗಿರುತ್ತದೆ? ಶಿಕ್ಷಕರ ದಿನದಂದು ಭೋಜ್ಪುರಿ ಹಾಡುಗಳಿಗೆ ನೃತ್ಯ ಮಾಡುವುದು ಎಂದರೆ!” ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಇತ್ತೀಚಿನ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ವೀಡಿಯೊದಲ್ಲಿ, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ನೃತ್ಯವು ತುಂಬಾ ಅಶ್ಲೀಲವಾಗಿದೆ ಮತ್ತು ಚಿಕ್ಕ ಮಕ್ಕಳಿಗೆ ಅಂತಹ ವಿಷಯಗಳನ್ನು ತೋರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಾರೆ. ವೀಡಿಯೊದಲ್ಲಿ, 5 ರಿಂದ 7 ವರ್ಷದೊಳಗಿನ ಶಾಲಾ ಬಾಲಕಿಯರು ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್’ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
https://twitter.com/i/status/1832430400901128323