ಪನಾಮದ ಪೆಸಿಫಿಕ್ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಫುಟ್ ಬಾಲ್ ಪಂದ್ಯದ ವೇಳೆ ಆಟಗಾರರು ನೆಲಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಮಂಗಳವಾರ ಪನಾಮದ ಪೆಸಿಫಿಕ್ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ದೃಢಪಡಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಹೇಳಿದರು.
ಚಿರಿಕಿ ಪ್ರಾಂತ್ಯದ ಬೊಕಾ ಚಿಕಾದಿಂದ ದಕ್ಷಿಣಕ್ಕೆ 72 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. ಕೋಸ್ಟರಿಕಾದಲ್ಲಿ ಯಾವುದೇ ಹಾನಿ ವರದಿಯಾಗಿಲ್ಲ ಎಂದು ದೇಶದ ರಾಷ್ಟ್ರೀಯ ತುರ್ತು ಆಯೋಗ ತಿಳಿಸಿದೆ.
ಪನಾಮದಲ್ಲಿ ನಡೆದ ಸ್ಥಳೀಯ ಫುಟ್‌ಬಾಲ್ ಪಂದ್ಯವೊಂದರಲ್ಲಿ ಭೂಕಂಪದ ಹೊಡೆತದಿಂದ ಆಟಗಾರರೊಬ್ಬರು ನೆಲಕ್ಕೆ ಬಿದ್ದರು. ಪಂದ್ಯದ ನೇರ ಪ್ರಸಾರ ವೇಳೆ ಇದು ಟಿವಿ ಪರದೆಯಲ್ಲಿ ಕಂಡುಬಂದಿದೆ. ಭೂಕಂಪದ ಪರಿಣಾಮ ಮೈದಾನ ನಡುಗಿದ್ದರಿಂದ ಆಟಕ್ಕೆ ವಿರಾಮ ನೀಡಲಾಯಿತು.
https://twitter.com/sirajnoorani/status/1643385924628389890?ref_src=twsrc%5Etfw%7Ctwcamp%5Etweetembed%7Ctwterm%5E1643385924628389890%7Ctwgr%5E031cc96348f84bc62c24f91f046f3cee108f4dfb%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwatch66magnitudeearthquakestopsfootballmatchinpanamaasplayerfallslivetvvisualssurface-newsid-n487072184