ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ತಾತ್ಕಾಲಿಕ ವೇದಿಕೆ ಕುಸಿದು ಬಿದ್ದ ಪರಿಣಾಮ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಭಾನುವಾರ ಗಾಯಗೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಪಂಜಿನ ರ್ಯಾಲಿ ಆಯೋಜಿಸಿತ್ತು. ಘಟನೆಯಲ್ಲಿ ಪಕ್ಷದ ಇತರ ಕೆಲವು ಸದಸ್ಯರೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಕಿಕ್ಕಿರಿದ ವೇದಿಕೆಯು ಏಕಾಏಕಿ ಕುಸಿದು ಬಿದ್ದಿದೆ.
ಘಟನೆಯಲ್ಲಿ ಶಾಸಕರಾದ ಶೈಲೇಶ್ ಪಾಂಡೆ ಮತ್ತು ರಶ್ಮಿ ಸಿಂಗ್ ಮತ್ತು ಪಕ್ಷದ ಇತರ ಕೆಲವು ನಾಯಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಛತ್ತೀಸ್‌ಗಢ ಕಾಂಗ್ರೆಸ್ ಘಟಕದ ಮುಖ್ಯಸ್ಥ ಮೋಹನ್ ಮಾರ್ಕಮ್ ಅವರು ಪ್ರತಿಭಟನಾ ಸ್ಥಳವಾದ ದೇವಕಿನಂದನ್ ಚೌಕ್‌ನಲ್ಲಿದ್ದರು. ಆದರೆ ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಘಟನೆ ನಡೆದ ತಕ್ಷಣ ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
#WATCH | Chhattisgarh: Stage breaks down during torch rally organized by Congress to protest against termination of Rahul Gandhi's membership of Lok Sabha in Bilaspur. (02.04.23) pic.twitter.com/PjnXREl5JN
— ANI (@ANI) April 3, 2023