ಕಾಲು ಗಾಯದಿಂದ ಬಳಲುತ್ತಿದ್ದ ರಾಶ್ಮಿಕಾ ಮಂದಣ್ಣ ಇದೀಗ ಚೇತರಿಸಿಕೊಂಡು ತಮ್ಮ ಮುಂಬರುವ ಚಿತ್ರ “ಛಾವಾ”ದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
“ಛಾವಾ” ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಹಿಂದೆ ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿರಲಿಲ್ಲ. ಈಗ ಆಗಮಿಸಿದ ಅವರನ್ನು ಅಭಿಮಾನಿಗಳು ಹುರಿದುಂಬಿಸಿದ್ದು, ವಿಕ್ಕಿ ಕೌಶಲ್ ಸಹ “ನಾನು ಇಂದು ಒಬ್ಬಂಟಿಯಾಗಿ ಬಂದಿಲ್ಲ. ಮಹಾರಾಣಿ ಹೈದರಾಬಾದ್‌ನಿಂದ ವಿಶೇಷವಾಗಿ ನಮ್ಮೊಂದಿಗೆ ಬರಲು ಬಂದಿದ್ದಾರೆ” ಎಂದು ಹೇಳಿದರು. ನಂತರ ರಶ್ಮಿಕಾ ಪ್ರೇಕ್ಷಕರನ್ನು ಕುರಿತು ” ಹೇಗಿದ್ದೀರಾ? ಎಲ್ಲರೂ ಚೆನ್ನಾಗಿದ್ದೀರಾ? ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಧನ್ಯವಾದಗಳು. ನಮ್ಮೊಂದಿಗೆ ಈ ಪಾರ್ಟಿಯನ್ನು ಆನಂದಿಸಿ” ಎಂದರು.
“ಛಾವಾ” ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನಚರಿತ್ರೆಯ ಐತಿಹಾಸಿಕ ಸಿನಿಮಾವಾಗಿದ್ದು, ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಶುತೋಷ್ ರಾಣಾ ಮತ್ತು ದಿವ್ಯಾ ದತ್ತಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.