ವಂದೇ ಭಾರತ್ ಎಕ್ಸ್‌ಪ್ರೆಸ್ ದಿನದಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಲೇ ಇರೋ ಮೇಕ್ ಇನ್ ಇಂಡಿಯಾ ರೈಲು. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ಹೈಸ್ಪೀಡ್ ರೈಲು, ಹತ್ತುಹಲವಾರು ವಿಶೇಷತೆಗಳಿಂದ ಕೂಡಿದೆ. ಅದರಲ್ಲೂ ಕಡಿಮೆ ಸಮಯದಲ್ಲಿ ದೂರದ ಪ್ರಯಾಣವನ್ನ ಮಾಡಲು ಈ ರೈಲು ಹೆಚ್ಚು ಅನುಕೂಲಕರವಾಗಿದೆ. ಇದೇ ಕಾರಣಕ್ಕೆ ವಂದೇ ಭಾರತ್ ರೈಲಿನಲ್ಲೇ ಪ್ರಯಾಣ ಮಾಡಲು ಜನರು ಇಷ್ಟಪಡುತ್ತಿದ್ದಾರೆ.
ಈಗ ಇದೇ ವಂದೇ ಭಾರತ್ ರೈಲು ಚೆನ್ನೈ-ಮೈಸೂರು ಮಾರ್ಗವಾಗಿ ಚಲಿಸುತ್ತಿರುವಾಗ ಕಂಡು ಬಂದು ಅದ್ಭುತ ದೃಶ್ಯವೊಂದನ್ನ ದಕ್ಷಿಣ ರೈಲ್ವೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿ ಲಕ್ಷಾಂತರ ಜನ ಮೂಕವಿಸ್ಮಿತರಾಗಿ ಹೋಗಿದ್ದಾರೆ. ಹಚ್ಚ ಹಸಿರಿನ ನಡುವೆ ಸಾಗುತ್ತಿರುವ ವಂದೇ ಭಾರತ್ ರೈಲಿನ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಸೆಳೆದಿದೆ.
“#VandeBharatExpress – ಈ ರೈಲು ಅತ್ಯಾಧುನಿಕ ಸೌಲಭ್ಯದ ಜೊತೆ ಜೊತೆಗೆ, ವೇಗ, ಗಮನಾರ್ಹ ವಿನ್ಯಾಸ ಮತ್ತು ಅಪಡೇಟೆಡ್ ಸೌಲಭ್ಯಗಳು ಪ್ರಯಾಣಿಕರ ಪಯಣವನ್ನ ಇನ್ನಷ್ಟು ಸುಖಕರ ಅಷ್ಟೆ ಆರಾಮದಾಯಕವನ್ನಾಗಿ ಮಾಡಿದೆ. ಇದೇ ರೈಲು ಪ್ರಕೃತಿ ಸೌಂದರ್ಯದ ಸಿರಿಯ ನಡುವೆಯೇ ಹಾದು ಹೋದರೆ ಹೇಗಿರುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ ಅನ್ನೋದಕ್ಕೆ ಈ ವಿಡಿಯೋ ನೋಡೋಣ’ ಎಂದು ದಕ್ಷಿಣ ರೈಲ್ವೆ ಇಲಾಖೆ ಶೀರ್ಷಿಕೆಯಲ್ಲಿ ಬರೆದಿದೆ.
ಕಳೆದ ನವೆಂಬರ್ ತಿಂಗಳಲ್ಲಿ ದಕ್ಷಿಣ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿತ್ತು. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ತಮಿಳುನಾಡು ನಡುವೆ ಮುಂದಿನ ಪೀಳಿಗೆಯ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಈ ಮಾರ್ಗವು ದೇಶದಲ್ಲಿ ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಾಗಿದ್ದು, ದಕ್ಷಿಣ ಭಾರತದಲ್ಲಿ ಈ ಮಾರ್ಗ ಮೊದಲನೇಯದ್ದಾಗಿದೆ.
https://twitter.com/GMSRailway/status/1639239889438007296?ref_src=twsrc%5Etfw%7Ctwcamp%5Etweetembed%7Ctwterm%5E1639239889438007296%7Ctwgr%5E2df1a5400de700a9df1d6307bdfed4e6024d4e43%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-vande-bharat-express-passes-by-spectacular-landscape-on-chennai-to-mysuru-route-southern-railway-shares-video
https://twitter.com/fpjindia/status/1590931261052555264?ref_src=twsrc%5Etfw%7Ctwcamp%5Etweetembed%7Ctwterm%5E1590931261052555264%7Ctwgr%5E2df1a5400de700a9df1d6307bdfed4e6024d4e43%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-vande-bharat-express-passes-by-spectacular-landscape-on-chennai-to-mysuru-route-southern-railway-shares-video