Watch Video | ಬೆಂಬಲಿಗರೊಂದಿಗೆ ತಮಿಳಿನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಭಾರತೀಯ ಮೂಲದ ವಿವೇಕ್​ ರಾಮಸ್ವಾಮಿ ಭಾರತೀಯ ಮೂಲದ ಬೆಂಬಲಿಗರ ಬಳಿಯಲ್ಲಿ ನಾನು ತಮಿಳಲ್ಲಿ ಮಾತನಾಡಬಲ್ಲೆ ಎಂದು ಹೇಳುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ರಾಮಸ್ವಾಮಿ ಭಾರತೀಯ ಮೂಲದ ತಮಿಳರ ಜೊತೆಯಲ್ಲಿ ಮಾತನಾಡುತ್ತಿದ್ದು ಈ ವಿಡಿಯೋವನ್ನು ರಾಮಸ್ವಾಮಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿಯು ನಾನು ತಮಿಳುನಾಡಿನ ವೆಲ್ಲೂರಿನವರು ಎಂದು ಹೇಳುತ್ತಾರೆ. ಇಲ್ಲಿಂದ ಇಬ್ಬರ ಮಾತುಕತೆ ಆರಂಭವಾಗಿದ್ದನ್ನು ಕಾಣಬಹುದಾಗಿದೆ.

ನಿಮ್ಮಲ್ಲಿ ಕೇಳಲು ನನಗೆ ಯಾವುದೇ ಪ್ರಶ್ನೆಗಳಿಲ್ಲ. ಆದರೆ ನಾನು ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ನಾನು ನಿಮ್ಮನ್ನು ಯುನೈಟೆಡ್​ ಸ್ಟೇಟ್ಸ್​ನಂತೆ ನೋಡುತ್ತೇನೆ ಎಂದು ತಮಿಳು ಮೂಲದ ವ್ಯಕ್ತಿಯು ಹೇಳುತ್ತಿರೋದನ್ನ ಕೇಳಬಹುದಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾಮಸ್ವಾಮಿ, ಧನ್ಯವಾದಗಳು . ನಿಮ್ಮ ಮಾತುಗಳು ನನಗೆ ತುಂಬಾನೇ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಇದಾದ ಬಳಿಕ ಆ ವ್ಯಕ್ತಿಯು ನಾನು ವೆಲ್ಲೂರಿನವನು ಎಂದು ಹೇಳಿಕೊಳ್ತಾರೆ. ಇದಕ್ಕೆ ಉತ್ತರಿಸಿದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ರಾಮಸ್ವಾಮಿ, ನಾನು ಕೂಡ ತಮಿಳಿನಲ್ಲಿ ಮಾತನಾಡುತ್ತೇನೆ ಎಂದು ತಮಿಳಿನಲ್ಲಿಯೇ ಹೇಳಿದ್ದಾರೆ. ನಾನು ಅಮೆರಿಕದ ಅಧ್ಯಕ್ಷನಾಗಬೇಕೆಂದು ಬಯಸಿದ್ದೇನೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಇದಕ್ಕೆ ತಮಿಳು ಭಾಷಿಗ ವ್ಯಕ್ತಿಯು ನೀವು ಅಮೆರಿಕದ ಅಧ್ಯಕ್ಷರಾಗಬೇಕು ಎಂದು ನಾನೂ ಬಯಸುತ್ತೇನೆ ಎಂದು ಹೇಳಿದ್ದಾರೆ.

https://twitter.com/i/status/1706012654861533186

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read