ಭಾರತದ ಭವ್ಯ ಸಂಸ್ಕೃತಿ ವರ್ಣಿಸಿದ ಅಮೆರಿಕದ ಬ್ಲಾಗರ್​: ವಿಡಿಯೋ ವೈರಲ್​

ದೆಹಲಿ: ಭಾರತ ಹಲವು ಸಂಸ್ಕೃತಿಗಳ ಆಗರ. ದೇಶದ ಪ್ರತಿಯೊಂದು ಮೂಲೆಯು ಶ್ರೀಮಂತ ಪರಂಪರೆಯ ಚೈತನ್ಯದಿಂದ ಕೂಡಿದೆ. ಅಮೆರಿಕದ ಬ್ಲಾಗರ್ ಐಟನ್​ ಒಬ್ಬರು ಹಳೆಯ ದೆಹಲಿಯಲ್ಲಿ ಗುರುದ್ವಾರದ ಬಗ್ಗೆ ತಮ್ಮ ವಿಶೇಷ ಅನುಭವ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಗುರುದ್ವಾರಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನ ಎಷ್ಟು ಮಂತ್ರಮುಗ್ಧರು ಎಂಬ ಬಗ್ಗೆ ವಿವರಿಸಿದ್ದಾರೆ. ವಿಡಿಯೋದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಪ್ರಾಚೀನ ಗುರುದ್ವಾರದ ಅಡುಗೆಮನೆಯಲ್ಲಿ ಕುಳಿತಿರುವುದನ್ನು ಕಾಣಬಹುದು. “ನಂಬಲಾಗದ ಅನುಭವ” ಎಂದು ಅವರು ಹೇಳಿಕೊಂಡಿದ್ದಾರೆ.

ಅಡುಗೆಮನೆಯ ಒಳಭಾಗದಲ್ಲಿ ಪ್ರತಿ ಗಂಟೆಗೆ 4,000 ರೊಟ್ಟಿಗಳನ್ನು ಉತ್ಪಾದಿಸುವ “ಸ್ವಯಂಚಾಲಿತ ರೊಟ್ಟಿ ತಯಾರಿಸುವ ಯಂತ್ರ” ದ ಬಗ್ಗೆ ಆಶ್ಚರ್ಯದಿಂದ ಅವರು ಮಾತನಾಡಿದ್ದಾರೆ. ತಾವೂ ರೊಟ್ಟಿ ಮಾಡಲು ಪ್ರಯತ್ನಿಸಿದ್ದು ಅದನ್ನೂ ಬರೆದುಕೊಂಡಿದ್ದಾರೆ.

ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದ ಸೌಂದರ್ಯವನ್ನು ಅನುಭವಿಸಿದ್ದಕ್ಕಾಗಿ ಐಟನ್ ಅವರನ್ನು ಶ್ಲಾಘಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read