ಪ್ರಾಪರ್ಟಿ ಡೀಲರ್ ಜೊತೆ ರೀಲ್ಸ್ ಮಾಡಿದ ಕಾರಣಕ್ಕೆ ಉತ್ತರ ಪ್ರದೇಶದ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳಿಗೆ ಸಂಕಷ್ಟ ಎದುರಾಗಿದೆ. ಅವರಿಬ್ಬರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದ್ದು, ಜೊತೆಗೆ ಇಲಾಖಾ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.
ಉತ್ತರದ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಅಂಕುರ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಧರ್ಮೇಂದ್ರ ಶರ್ಮಾ ಹಾಗೂ ರಿತೇಶ್ ಕುಮಾರ್, ಪ್ರಾಪರ್ಟಿ ಡೀಲರ್ ಸರ್ತಾಜ್ ಜೊತೆ ರೀಲ್ಸ್ ಮಾಡಿದ ಕಾರಣಕ್ಕೆ ಅಮಾನತುಗೊಳಗಾದವರಾಗಿದ್ದಾರೆ.
ಇವರಿಬ್ಬರು ಜನನಿನಿಬಿಡ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಎರಡು SUV ನಡುವೆ ನಿಂತಿದ್ದ ಸರ್ತಾಜ್ ಗೆ ಹಸ್ತಲಾಘವ ಮಾಡಿ ಬಳಿಕ ಸ್ಲೋ ಮೋಷನ್ ನಲ್ಲಿ ಮೂವರೂ ನಡೆದು ಬರುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ತರಹೇವಾರಿ ಕಾಮೆಂಟ್ ಗಳು ಬಂದಿವೆ.
https://twitter.com/priyarajputlive/status/1809505067843596477?ref_src=twsrc%5Etfw%7Ctwcamp%5Etweetembed%7Ctwterm%5E1809505067843596477%7Ctwgr%5Ed35