ಲವ್‌, ಸೆಕ್ಸ್‌, ಧೋಕಾ : ತಕ್ಕ ಪಾಠ ಕಲಿಸಿದ ಬುಡಕಟ್ಟು ಯುವತಿ | Watch Video

ಒಡಿಶಾದಲ್ಲಿ ನಡೆದ ಲವ್‌, ಸೆಕ್ಸ್‌, ಧೋಕಾ ಪ್ರಕರಣದಲ್ಲಿ ಬುಡಕಟ್ಟು ಯುವತಿಯೊಬ್ಬಳು ಒಎಎಸ್‌ ಅಧಿಕಾರಿಗೆ ಬುದ್ಧಿ ಕಲಿಸಿದ್ದಾಳೆ. ಜಗತ್ಸಿಂಗ್‌ಪುರ ಸಾದರ್ ಟೌನ್ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರ್ಕಂಡಪುರ ನಿವಾಸಿಯಾದ ಒಎಎಸ್‌ ಅಧಿಕಾರಿಯ ವಿರುದ್ಧ ಆಕೆ ದೂರು ದಾಖಲಿಸಿದ್ದಳು. ಅಂತಿಮವಾಗಿ ಆಕೆಗೆ ನ್ಯಾಯ ಸಿಕ್ಕಿದೆ. ಒಎಎಸ್‌ ಅಧಿಕಾರಿ ಮತ್ತು ಆತನ ಕುಟುಂಬ ಯುವತಿಯನ್ನು ಸ್ವೀಕರಿಸಲು ಒಪ್ಪಿಕೊಂಡಿದೆ.

ಯುವತಿ ನೀಡಿದ ದೂರಿನಲ್ಲಿ, ಒಎಎಸ್‌ ಅಧಿಕಾರಿ ಮತ್ತು ಆಕೆ ಸೋದರ ಸಂಬಂಧಿಗಳಾಗಿದ್ದು, 6ನೇ ತರಗತಿಯಿಂದ ಪ್ರೇಮ ಸಂಬಂಧ ಹೊಂದಿದ್ದರು. ಆತ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗಲೂ ಅವರ ಸಂಬಂಧ ಮುಂದುವರೆಯಿತು. ಸಂತಾಲಿ ಸಮುದಾಯಕ್ಕೆ ಸೇರಿದ ಯುವತಿಯನ್ನು ಆತ ಸಂತಾಲಿ ಸಂಪ್ರದಾಯದಂತೆ ರಹಸ್ಯವಾಗಿ ಮದುವೆಯಾಗಿದ್ದ.

ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಆದರೆ ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಲಿಲ್ಲ. ಅಲ್ಲದೇ, ಆಕೆಯನ್ನ ಬೇರೆಯವರಿಗೆ ಹೆಂಡತಿಯಾಗಿ ಪರಿಚಯಿಸಲಿಲ್ಲ. ಕಳೆದ ವರ್ಷ ಒಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ ಆತ ಆಕೆಯಿಂದ ದೂರವಾಗಲು ಪ್ರಾರಂಭಿಸಿದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಳು.

ಈ ಪ್ರಕರಣದಲ್ಲಿ ಬುಡಕಟ್ಟು ಯುವತಿಗೆ ನ್ಯಾಯ ಸಿಕ್ಕಿದೆ. ಒಎಎಸ್‌ ಅಧಿಕಾರಿ ಮತ್ತು ಆತನ ಕುಟುಂಬ ಆಕೆಯನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read