ಮೋದಿ ಕುರಿತು ರೈಲ್ವೆ ಆಹಾರ ಮಾರಾಟಗಾರನ ಅದ್ಭುತ ಕವಿತೆಗೆ ನೆಟ್ಟಿಗರು ಫಿದಾ

ಕೆಲವು ವರ್ಷಗಳ ಹಿಂದೆ ತನ್ನ ಚಮತ್ಕಾರಿ ಸಂಭಾಷಣೆಗಾಗಿ ಮತ್ತು ಪ್ರಯಾಣಿಕರೊಂದಿಗೆ ಕವಿತೆಗಳನ್ನು ಹಂಚಿಕೊಂಡ ರೈಲ್ವೆಯಲ್ಲಿ ಆಹಾರ ಮಾರಾಟಗಾರ ದುಬೆ ನೆನಪಿದೆಯೇ? ಅವರ ವೀಡಿಯೊಗಳನ್ನು ಇತ್ತೀಚೆಗೆ ನೆಟಿಜನ್‌ಗಳು ಮತ್ತೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಇದು ಇಂಟರ್ನೆಟ್‌ನಲ್ಲಿ ಪ್ರಭಾವ ಬೀರುತ್ತಿದೆ.

ತಿಳಿಯದವರಿಗೆ, ದುಬೆ ಕೂಡ ಯೂಟ್ಯೂಬರ್ ಆಗಿದ್ದು, ಅವರು ರೈಲಿನಿಂದ ಆನ್‌ಲೈನ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅವರ ವೀಡಿಯೊ-ಹಂಚಿಕೆ ವೇದಿಕೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಚಂದಾದಾರರು ಇದ್ದಾರೆ.

ಮಿನ್ನಿ ರಜ್ದಾನ್ ಎಂಬ ಬಳಕೆದಾರರಿಂದ ಹಂಚಿಕೊಂಡ ಈ ವಿಡಿಯೋ ಭಾರಿ ವೈರಲ್​ ಆಗಿದೆ. ಇದರಲ್ಲಿ ದುಬೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ತನ್ನನ್ನು ಪರಿಚಯಿಸಿಕೊಳ್ಳುವುದನ್ನು ನಾವು ನೋಡಬಹುದು ಮತ್ತು ಮೋದಿಯವರು ದೇಶಕ್ಕಾಗಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಅವರು ಅದ್ಭುತವಾಗಿ ಕವಿತೆಯಲ್ಲಿ ಶ್ಲಾಘಿಸಿದ್ದಾರೆ.

ಮೋದಿಯನ್ನು ಹೊಗಳಿದ್ದಕ್ಕೆ ಜೈಲುವಾಸ ಅನುಭವಿಸಬೇಕಾಯಿತು. ಆದರೆ ಜೈಲಿನಲ್ಲಿಯೂ ಇರುವ ಸುರಕ್ಷತೆ, ಸೌಲಭ್ಯ ನೋಡಿ ಮೋದಿಯವರನ್ನು ಮತ್ತಷ್ಟು ಕೊಂಡಾಡುವಂತಾಯಿತು ಎಂದು ತಮ್ಮದೇ ಅದ್ಭುತ ಶೈಲಿಯಲ್ಲಿ ಇವರು ಗುಣಗಾನ ಮಾಡಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರನ್ನೂ ಕೊಂಡಾಡಿದ್ದಾರೆ.

https://twitter.com/mini_razdan10/status/1632005961605890048?ref_src=twsrc%5Etfw%7Ctwcamp%5Etweetembed%7

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read