ಲೋಲಕದಲ್ಲಿ ತಲೆಕೆಳಗಾಗಿ ನೇತಾಡಿದ ಪ್ರವಾಸಿಗರು; ಭಯಾನಕ ಘಟನೆಯ ವಿಡಿಯೋ ವೈರಲ್

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಜನರು ಆನಂದಿಸುವ ಮತ್ತು ಥ್ರಿಲ್ ಪಡೆಯುವ ಮೋಜಿನ ಸ್ಥಳಗಳಾಗಿವೆ. ಆದರೆ ಕೆಲವರಿಗೆ ವೇಗವಾಗಿ ಚಲಿಸುವ, ಸುತ್ತುತ್ತಿರುವ ಟ್ರ್ಯಾಕ್ ಅನ್ನು ಸವಾರಿ ಮಾಡುವ ಮತ್ತು ಇಳಿಯುವ ಕಲ್ಪನೆಯು ಭಯಾನಕವಾಗಬಹುದು.

ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಸಂತೋಷದಿಂದ ಕಿರುಚುವುದು ಬೇರೆ, ಸಂಕಷ್ಟಕ್ಕೆ ಸಿಲುಕಿದಾಗ ಕಿರುಚೋದು ಬೇರೆ. ಎಂಜಾಯ್ ಮಾಡಲು ಹೋದ ಪ್ರವಾಸಿಗರು ಅಮ್ಯೂಸ್ ಮೆಂಟ್ ಪಾರ್ಕ್ ನ ದೊಡ್ಡ ಲೋಲಕದಲ್ಲಿ ತಲೆಕೆಳಕಾದ ಸ್ಥಿತಿಯಲ್ಲಿ ನಿಮಿಷಗಟ್ಲೇ ಸಿಲುಕಿ ಸಂಕಷ್ಟಪಡುವಂತಹ ಘಟನೆ ಚೀನಾದಲ್ಲಿ ನಡೆದಿದೆ.

ಅನ್ಹುಯಿ ಪ್ರಾಂತ್ಯದ ಫ್ಯೂಯಾಂಗ್ ನಗರದ ಮನೋರಂಜನಾ ಉದ್ಯಾನವನದಲ್ಲಿ ಗುಂಪೊಂದು ಇಂತಹ ಸ್ಥಿತಿಯಿಂದ ಭಯ ಅನುಭವಿಸಿದೆ. ದೈತ್ಯ ಲೋಲಕದ ಸವಾರಿ ಸುಮಾರು 10 ನಿಮಿಷಗಳ ಕಾಲ ಚಲನರಹಿತವಾಗಿತ್ತು. ಜನವರಿ 19 ರಂದು ದೈತ್ಯ ಪೆಂಡಾಲ್ ಸವಾರಿ ಮುರಿದು ಬಿದ್ದ ನಂತರ ಉದ್ಯಾನವನದಲ್ಲಿ ಪ್ರವಾಸಿಗರು ತಲೆಕೆಳಗಾಗಿ ನೇತಾಡುತ್ತಿದ್ದರು.

ವೈರಲ್ ವಿಡಿಯೋ ಪ್ರಕಾರ ಯಾಂತ್ರಿಕ ವೈಫಲ್ಯದಿಂದ ಚಲಿಸುತ್ತಿದ್ದ ಲೋಲಕ ಎತ್ತರದಲ್ಲಿದ್ದಾಗ ಚಲಿಸದೇ ಹಾಗೇ ನಿಂತುಕೊಂಡು ಬಿಡ್ತು. ಪ್ರವಾಸಿಗರು ಭಯಗೊಂಡು ಕಿರುಚಾಡುತ್ತಿದ್ದಂತೆ ಹಲವು ಪ್ರಯತ್ನಗಳ ಬಳಿಕ ಅಧಿಕಾರಿಗಳು ರೈಡ್‌ನಲ್ಲಿ ಕಂಬಗಳನ್ನು ಏರುವ ಮೂಲಕ ರೈಡ್ ಅನ್ನು ಸರಿಪಡಿಸಲು ನಿರ್ಧರಿಸಿದರು.

ಅದೃಷ್ಟವಶಾತ್ ಅಧಿಕಾರಿಗಳು ಸವಾರಿಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 10 ನಿಮಿಷಗಳಲ್ಲಿ ಅದನ್ನು ಸ್ಥಳಾಂತರಿಸಿದ್ದು, ಅಮ್ಯೂಸ್‌ಮೆಂಟ್ ಪಾರ್ಕ್ ಅಧಿಕಾರಿಗಳು ಪ್ರವಾಸಿಗರಿಗೆ ಮರುಪಾವತಿಯನ್ನು ನೀಡಿ ಸವಾರಿ ವೈಫಲ್ಯದಿಂದ ಉಂಟಾದ ಆಘಾತಕ್ಕೆ ವೈದ್ಯಕೀಯ ವೆಚ್ಚಗಳಿಗೆ ಸಹಾಯ ಮಾಡಿದ್ದಾರೆ. ಲೋಲಕದಲ್ಲಿ ಹೆಚ್ಚು ಜನರು ಕೂತಿದ್ದರಿಂದ ತೂಕದ ಮಿತಿ ಮೀರಿದ ಕಾರಣ ಸ್ವಿಂಗ್ ಸಮಸ್ಯೆ ಅನುಭವಿಸಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read