ಕೋಲ್ಕತಾ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ರಸ್ತೆ ಬದಿಯ ಚಹಾ ಅಂಗಡಿಯೊಂದರಲ್ಲಿ ಚಹಾ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ಷ್ಮವಾಗಿ ಪಂಚ್ ನೀಡಲು ಮಹುವಾ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
“ಚಾಯ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮುಂದೊಂದು ದಿನ ಇದು ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಯಾರಿಗೆ ತಿಳಿದಿದೆ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಹೇಳಿರುವ ಮಹುವಾ ಅವರು, ತಮ್ಮ ಆರಂಭಿಕ ದಿನಗಳಲ್ಲಿ ಗುಜರಾತ್‌ನ ಚಹಾ ಮಾರಾಟಗಾರರಾಗಿದ್ದ ಪ್ರಧಾನಿ ಮೋದಿಯವರನ್ನು ಕೆಣಕಿದ್ದಾರೆ.
ಜನರ ಗುಂಪು ಸೇರಿದಾಗ ಇವರು ಚಹಾಕ್ಕೆ ಸಕ್ಕರೆ ಸೇರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ರಸ್ತೆ ಬದಿಯ ಟೀ ಔಟ್‌ಲೆಟ್‌ನಲ್ಲಿರುವ ಚಾಯ್‌ವಾಲಾದಿಂದ ಸಹಾಯ ಪಡೆಯುತ್ತಿರುವುದನ್ನು ಇದರಲ್ಲಿ ನೋಡಬಹುದು. ಕೃಷ್ಣನಗರದ ಮೊಯಿತ್ರಾ ಲೋಕಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಇವರ ವಿರುದ್ಧ ಹಲವರು ಕಿಡಿ ಕಾರುತ್ತಿದ್ದಾರೆ. ಪ್ರಧಾನಿ ಮೋದಿ ಅಭಿಮಾನಿಗಳು ಇವರನ್ನು ಟ್ರೋಲ್ ಮಾಡುತ್ತಿದ್ದಾರೆ.
https://twitter.com/MahuaMoitra/status/1613219400492150785?ref_src=twsrc%5Etfw%7Ctwcamp%5Etweetembed%7Ctwterm%5E1613219400492150785%7Ctwgr%5Ed86862b98d1e4713f9cd77a535eb031a47048047%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-tmc-leader-mahua-moitra-prepares-tea-at-a-roadside-store-in-bengal-video-goes-viral