ಪ್ರಸಿದ್ಧಿಗೆ ಬರಲು ಹಸಿಹಸಿ ಮೀನುಗಳನ್ನು ಕಚಕಚ ತಿಂದ ಯುವತಿ- ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಜನರು ಎಷ್ಟು ಬೇಕಾದರೂ ಮುಂದಕ್ಕೆ ಹೋಗಬಹುದು. ಇತ್ತೀಚೆಗೆ, ಯುವತಿಯೊಬ್ಬರು ಸೂಪರ್ ಮಾರ್ಕೆಟ್‌ನಿಂದ ನೇರವಾಗಿ ಪ್ಯಾಕೆಟ್‌ನಿಂದ ಹಸಿ ಸಾಲ್ಮನ್ ಎಂಬ ಜಾತಿಯ ಮೀನನ್ನು ತಿಂದು ವೈರಲ್​ ಆಗಿದ್ದಾಳೆ.

ನಾರ್ತ್ ಯಾರ್ಕ್‌ಷೈರ್‌ನ ಹಾರೊಗೇಟ್ ನಿವಾಸಿಯಾಗಿರುವ ಅಗ್ಗೀ ವಾಲರ್ ಹಸಿ ಮೀನುಗಳನ್ನು ತಿನ್ನುವ ಗೀಳನ್ನು ಹೊಂದಿದ್ದಾಳೆ. ಅವಳ ವಿಡಿಯೋ ಈಗ ವೈರಲ್​ ಆಗಿದೆ.

ಮಹಿಳೆ ಈ ಮೀನಿನ ಪ್ಯಾಕೆಟ್​ ಅನ್ನು ಸಾರ್ವಜನಿಕ ಸಾರಿಗೆಯಲ್ಲಿ ತಿನ್ನುವ ಮೂಲಕ ಭಾರಿ ಸುದ್ದಿ ಮಾಡಿದ್ದಾಳೆ. ಈಕೆ ಮಾಡಿರುವ ವಿಡಿಯೋ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈ ರೀತಿ ತಿನ್ನುವುದನ್ನು ನೋಡಿ ಹಲವರು ಅಸಹ್ಯ ಪಟ್ಟುಕೊಂಡಿದ್ದರೆ, ಆಕೆಯ ಆರೋಗ್ಯದ ಸ್ಥಿತಿ ಏನಾಗಬೇಕು ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಾಲ್ಮನ್​ ಮೀನುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಜಂತುಹುಳುಗಳು ಹೆಚ್ಚಾಗುತ್ತವೆ ಎನ್ನಲಾಗಿದೆ. ಆದ್ದರಿಂದ ಈ ಯುವತಿ ಹುಳುಗಳು ಗೂಡು ಎಂದು ಹಲವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಕಚ್ಚಾ ಮೀನು ಎಷ್ಟು ಅಪಾಯಕಾರಿ ಎಂದು ತಿಳಿದಿದ್ದರೂ ಪ್ರಸಿದ್ಧಿಗೆ ಬರುವ ಉದ್ದೇಶದಿಂದ ಇಂಥದ್ದೊಂದು ಕೃತ್ಯಕ್ಕೆ ಇಳಿದಿರುವುದು ಸರಿಯಲ್ಲ ಎಂದು ಹಲವರು ಹೇಳುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read