ಗುಜರಾತ್ ನ ಕಾಂಡ್ಲಾದಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಸ್ಪೈಸ್‌ಜೆಟ್ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಟೇಕಾಫ್ ಆಗುವ ಸಮಯದಲ್ಲಿ ವಿಮಾನದ ಹೊರ ಚಕ್ರ ರನ್ ವೇ ಮೇಲೆ ಬಿದ್ದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನವು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.
ವಿಮಾನವು ಕಾಂಡ್ಲಾ ವಿಮಾನ ನಿಲ್ದಾಣದಿಂದ ಹೊರಟು ಮುಂಬೈಗೆ ತೆರಳುತ್ತಿತ್ತು. ವಿಮಾನದ ಆರಂಭಿಕ ಹಂತದ ರನ್‌ವೇಯಲ್ಲಿ ಹೊರ ಚಕ್ರ ಕಂಡುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು.
ಸೆಪ್ಟೆಂಬರ್ 12 ರಂದು ಕಾಂಡ್ಲಾದಿಂದ ಮುಂಬೈಗೆ ಕಾರ್ಯನಿರ್ವಹಿಸುತ್ತಿದ್ದ ಸ್ಪೈಸ್‌ಜೆಟ್ Q400 ವಿಮಾನ ಟೇಕಾಫ್ ಆದ ನಂತರ ಅದರ ಹೊರ ಚಕ್ರವು ರನ್ ವೇಯಲ್ಲಿ ಕಂಡುಬಂದಿದೆ. ವಿಮಾನವು ಮುಂಬೈಗೆ ತನ್ನ ಪ್ರಯಾಣವನ್ನು ಮುಂದುವರೆಸಿತು. ಸುರಕ್ಷಿತವಾಗಿ ಇಳಿಯಿತು. ಸುಗಮವಾದ ಲ್ಯಾಂಡಿಂಗ್ ನಂತರ ವಿಮಾನವು ತನ್ನದೇ ಆದ ಶಕ್ತಿಯ ಅಡಿಯಲ್ಲಿ ಟರ್ಮಿನಲ್‌ಗೆ ಟ್ಯಾಕ್ಸಿ ಮಾಡಿತು ಮತ್ತು ಎಲ್ಲಾ ಪ್ರಯಾಣಿಕರು ಸಾಮಾನ್ಯವಾಗಿ ಇಳಿದರು ಎಂದು ವಕ್ತಾರರು ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಹೇಳಿಕೆ
ಕಾಂಡ್ಲಾದ ವಿಮಾನವು ತಾಂತ್ರಿಕ ಸಮಸ್ಯೆಯನ್ನು ವರದಿ ಮಾಡಿದ ನಂತರ ಸೆಪ್ಟೆಂಬರ್ 12, 2025 ರಂದು 15:51 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ತುರ್ತು ಲ್ಯಾಂಡಿಂಗ್ ಮಾಡಿದೆ ಎಂದು ವಿಮಾನ ನಿಲ್ದಾಣವು ಹೇಳಿಕೆಯಲ್ಲಿ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ವಿಮಾನವು ರನ್‌ವೇ 27 ರಲ್ಲಿ ಸುರಕ್ಷಿತವಾಗಿ ಇಳಿಯಿತು, ಮತ್ತು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಸ್ವಲ್ಪ ಸಮಯದ ನಂತರ ಸಾಮಾನ್ಯ ಕಾರ್ಯಾಚರಣೆಗಳು ಪುನರಾರಂಭಗೊಂಡವು ಎಂದು ತಿಳಿಸಿದೆ.
Emergency declared at Mumbai Airport after a SpiceJet aircraft’s outer wheel detached from the plane.
— War & Gore (@Goreunit) September 12, 2025
pic.twitter.com/Z8nSoeixV1