ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಕೆಲವು ಆಕರ್ಷಕ ವಿಷಯಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಆಗಾಗ್ಗೆ ಶೇರ್ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ವಿಡಿಯೋ, ಅದೂ ಕರ್ನಾಟಕದ್ದು ಇದೀಗ ವೈರಲ್ ಆಗಿದೆ.
ಕರ್ನಾಟಕದ ದೇವಸ್ಥಾನವೊಂದರ ಆನೆ ಹಾಗೂ ನೃತ್ಯಗಾತಿಯ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಏಕದಂತಾಯ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಈಕೆಯ ಹಿಂದೆ ಆನೆ ನಿಂತಿದೆ.
ಆನೆಗೆ ನರ್ತಕಿ ಬಗ್ಗಿ ನಮಸ್ಕಾರ ಮಾಡುತ್ತಿದ್ದಂತೆಯೇ ಆನೆ ತನ್ನ ಸೊಂಡಿಲಿನಿಂದ ಆಕೆಗೆ ಆಶೀರ್ವಾದ ಮಾಡಿದೆ. ನಂತರ ತಾನೂ ಹಾಡಿಗೆ ತಕ್ಕಂತೆ ತಲೆ ಅಲ್ಲಾಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದು ಕರ್ನಾಟಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಘಟನೆ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
Sri Durgaaparameshwari temple , Kateel, Karnataka.
Amazing. And I would like to think the Temple Elephant is bestowing a blessing on all of us for a Happier New Year! 😊 pic.twitter.com/s2xdqV8w5D— anand mahindra (@anandmahindra) December 31, 2022
Elephants have so adorable look that let us feel Worshiping..
— – Himanshu Baria (@Himanshu_Baria_) December 31, 2022