ಇಂಗ್ಲೆಂಡ್​ ಬೀದಿಯಲ್ಲಿ ಬಾಲಿವುಡ್​ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಇಂಗ್ಲೆಂಡ್​ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ ‘ತೇರೆ ನಾಮ್’ ನಿಂದ ಜನಪ್ರಿಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.

ವಿಶ್ ಎಂಬ ಸಂಗೀತಗಾರ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಈ ವೈರಲ್​ ವಿಡಿಯೋದಲ್ಲಿ ಅವರು ಫುಟ್​ಪಾತ್​ ಮೇಲೆ ನಿಂತಿರುವುದನ್ನು ನೋಡಬಹುದು. ಕೈಯಲ್ಲಿ ಮೈಕ್ರೊಫೋನ್ ಇದ್ದು ಸುತ್ತಲೂ ಸ್ಪೀಕರ್‌ಗಳು ಇವೆ. ಅವರ ಪ್ರದರ್ಶನವನ್ನು ವೀಕ್ಷಿಸಲು ಹಲವಾರು ಜನರು ನೆರೆದಿರುವುದು ಕಂಡುಬರುತ್ತದೆ,

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವಾಗ ವಿಶ್ ಅವರು ಲಂಡನ್ ಬೀದಿಯಲ್ಲಿ ತೇರೆ ನಾಮ್ ಅನ್ನು ಹಾಡುತ್ತಿದ್ದೇನೆ. ನೀವು ನನ್ನೊಂದಿಗೆ ಹಾಡಬೇಕೆಂದು ನಾನು ಬಯಸುತ್ತೇನೆ. ಬನ್ನಿ ಎಂದು ಎಲ್ಲರನ್ನೂ ಆಹ್ವಾನಿಸಿದ್ದಾರೆ. ‌

ಬಾಲಿವುಡ್​ ಸಂಗೀತವು ದೇಶದ ಗಡಿಯನ್ನು ದಾಟಿ ಬೇರೆಡೆ ಪಸರಿಸುತ್ತಿರುವುದಕ್ಕೆ ಹಲವು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

https://www.youtube.com/watch?v=mhmlvyGTUQc&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read