1960 ರ ಬಾಲಿವುಡ್ ಚಲನಚಿತ್ರ ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯ’ ಚಿತ್ರದಲ್ಲಿನ ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಹಾಡು ‘ಅಜೀಬ್ ದಸ್ತಾನ್ ಹೈ ಯೇ’ ಅನ್ನು ಪ್ಯಾರಿಸ್‌ನಲ್ಲಿ ಬೀದಿ ಕಲಾವಿದರೊಬ್ಬರು ಹಾಡುವ ವೀಡಿಯೊ ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.
ಟ್ವಿಟರ್ ಬಳಕೆದಾರ ಮಹೀರಾ ಘನಿ ಅವರು ಪ್ಯಾರಿಸ್‌ನ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. “ಈ ವ್ಯಕ್ತಿ ನಾನು ಎಲ್ಲಿಂದ ಬಂದವನು ಎಂದು ನನ್ನನ್ನು ಕೇಳಿದನು. ನಾನು ಪಾಕಿಸ್ತಾನದಿಂದ ಎಂದು ಹೇಳಿದ ತಕ್ಷಣ ಈ ಹಾಡು ಹೇಳಿದ” ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 10ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
ಈ ಗಾಯಕನ ಹೆಸರು ಘಾನಿಯಾಗಿದ್ದು, ಈತನ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ. ಅವರು ತಮ್ಮ ವಿದೇಶಿ ಉಚ್ಚಾರಣೆಯಲ್ಲಿ ಹಿಂದಿ ಹಾಡನ್ನು ಎಷ್ಟು ಸುಂದರವಾಗಿ ಹಾಡಿದ್ದಾರೆಂದು ಹಲವಾರು ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತಕ್ಕೆ ಭಾಷೆ, ಗಡಿಯ ಮಿತಿಯಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಭಾರತೀಯ ಕಲಾವಿದರು ಹಾಗೂ ಸಂಗೀತ ವಿಶ್ವಾದ್ಯಂತ ಶ್ಲಾಘನೆಗೆ ಭಾಜನವಾಗಿದೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
https://twitter.com/MaheeraGhani/status/1619271829293793282?ref_src=twsrc%5Etfw%7Ctwcamp%5Etweetembed%7Ctwterm%5E1619271829293793282%7Ctwgr%5E1dd29aa0a841cd78abb5eb7d846eb6143007cbb0%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-street-performer-singing-lata-mangeshkars-ajeeb-dastan-in-paris-wows-internet-3733391