ರೀಲ್ಸ್ ಹುಚ್ಚಿನಲ್ಲಿ ರೈಲು ಹಳಿ ಮೇಲೆ ಕುಣಿದ ಯುವತಿ; ವಿಡಿಯೋ ವೈರಲ್

ಹೆಚ್ಚಿನ ವೀಕ್ಷಣೆಗಳು ಹಾಗೂ ಲೈಕ್ಸ್ ಗಿಟ್ಟಿಸಲೆಂದು ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಚಿತ್ರವಿಚಿತ್ರ ಚೇಷ್ಟೆಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಕೆಲವರಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ.

ರೈಲು ಹಳಿಯೊಂದರ ಮೇಲೆ ಯುವತಿಯೊಬ್ಬಳು ಮನಬಂದಂತೆ ಕುಣಿಯುತ್ತಾ ರೀಲ್ಸ್ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾಳೆ. ನಾಲ್ಕು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಅವ್ನಿಕಾರಿಶ್ ಎಂಬ ಹೆಸರಿನ ಈ ಪ್ರೊಫೈಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಹೀಗೆ ಮಾಡುವಾಗ ರೈಲೇನಾದರೂ ಇದ್ದಕ್ಕಿದ್ದಂತೆ ಬಂದುಬಿಟ್ಟರೆ ಏನು ಮಾಡೋದು? ಎಂದು ಕಳಕಳಿ ತೋರಿ ಕಾಮೆಂಟ್‌ ಮಾಡಿರುವ ನೆಟ್ಟಿಗರು, ಈ ರೀತಿಯ ಹುಚ್ಚಾಟಗಳ ಸಲ್ಲದು ಎಂದಿದ್ದಾರೆ.

https://youtu.be/egoOapmLcqs

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read