ಮೈನಸ್​ ಡಿಗ್ರಿ ಚಳಿಯಲ್ಲಿ ಅಪ್ಪ-ಮಗಳ ಆಟ: ಕುತೂಹಲದ ವಿಡಿಯೋ ವೈರಲ್​

ಮಾಸ್ಕೋ: ರಷ್ಯಾದ ಯಾಕುಟ್ಸ್ಕ್ ನಗರದಲ್ಲಿ ಭಾನುವಾರ ತಾಪಮಾನವು -51 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ನಗರದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಬಬಲ್ ಮೇಕರ್ ಟಾಯ್ ಗನ್ ಮತ್ತು ಟ್ಯೂಬ್‌ನಿಂದ ಗುಳ್ಳೆಗಳನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಅತ್ಯಂತ ಕಡಿಮೆ ತಾಪಮಾನದಿಂದಾಗಿ, ಗುಳ್ಳೆಗಳು ಮನುಷ್ಯ ತೆರೆದ ಗಾಳಿಯಲ್ಲಿ ಬೀಸಿದ ತಕ್ಷಣ ಮಂಜುಗಡ್ಡೆಯಾಗಿ ಬದಲಾಗುತ್ತವೆ.

ವಿಡಿಯೋದಲ್ಲಿ ತಂದೆ ಮತ್ತು ಮಗಳು ಗುಳ್ಳೆಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ತಂದೆ ಗುಳ್ಳೆಗಳನ್ನು ಊದುತ್ತಾನೆ ಮತ್ತು ಮಗಳು ವೀಡಿಯೊ ರೆಕಾರ್ಡ್ ಮಾಡುತ್ತಿರುವುದು ಕಂಡುಬರುತ್ತದೆ. ಬಾಲ್ಯದಿಂದಲೂ ತನ್ನ ತಂದೆ, ಚಳಿಯಲ್ಲಿ ಗುಳ್ಳೆಗಳಿಗೆ ಏನಾಗುತ್ತದೆ ಎಂದು ಯೋಚಿಸುತ್ತಿದ್ದರು ಮತ್ತು ಈ ದಿನ ಅವರು ಆ ಗುಳ್ಳೆಗಳನ್ನು ಊದಿದ್ದರಿಂದ ಅವರ ಕನಸು ನನಸಾಯಿತು ಎಂದು ಮಗಳು ಹೇಳಿದ್ದಾಳೆ.

“ಇಲ್ಲಿ ಅತ್ಯಂತ ಸಂತೋಷವಾಗಿರುವುದು ನಮ್ಮ ತಂದೆ. ಅವರು ಬಾಲ್ಯದ ಕನಸು ನನಸಾಗಿದೆ” ಎಂದು ಮಗಳು ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾಳೆ. ವೈರಲ್​ ವಿಡಿಯೋ ನೋಡಿ ಜನರು ಬಹಳ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಚಳಿಯನ್ನು ಕಂಡು ಹಲವರು ಬೆಚ್ಚಿಬಿದ್ದಿದ್ದರೆ, ಈ ಗುಳ್ಳೆಯಾಟ ನೋಡಿ ತಮಗೂ ಹೀಗೆ ಮಾಡುವ ಮನಸಾಗುತ್ತಿದೆ ಎಂದು ಹಲವರು ಹೇಳಿಕೊಂಡಿದ್ದಾರೆ.

ಈ ವಿಡಿಯೋವನ್ನು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾಸ್ಕೋದಿಂದ ಪೂರ್ವಕ್ಕೆ 5,000 ಕಿಮೀ ದೂರದಲ್ಲಿರುವ ನಗರವು 3.5 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ರಷ್ಯಾದ ಉತ್ತರದ ಬಹುತೇಕ ನಗರಗಳು ತೀವ್ರ ಶೀತ ಹವಾಮಾನದಿಂದ ತತ್ತರಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read