ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಾಸ್ಟನ್‌ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್ ನಲ್ಲಿ ಜೋ ರೂಟ್ ಹಿಡಿದ ಕ್ಯಾಚ್ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದೆ. ಇಂಗ್ಲೆಂಡ್ ನ ಜೋ ರೂಟ್, ಅಲೆಕ್ಸ್ ಕ್ಯಾರಿಯನ್ನು ಔಟ್ ಮಾಡಲು ಹಿಡಿದ ಕ್ಯಾಚ್ ಅಚ್ಚರಿ ಮೂಡಿಸಿದೆ. ಅದಾಗ್ಯೂ ಅಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋಲಬೇಕಾಯಿತು.
ಬಾಲ್ ಎದುರಿಸಿದ ಅಲೆಕ್ಸ್ ಕ್ಯಾರಿ ಒಂದೆರಡು ಹೆಜ್ಜೆಗಳನ್ನು ಮುಂದಕ್ಕೆ ತೆಗೆದುಕೊಂಡು ಬೌಲರ್‌ನ ತಲೆಯ ಮೇಲೆ ಚೆಂಡನ್ನು ಶಕ್ತಿಯುತವಾಗಿ ಹೊಡೆದರು. ರನ್ ಓಡಲು ಮುಂದಾದರೂ ಅಷ್ಟೊತ್ತಿಗಾಗಲೇ ಚೆಂಡು ಜೋ ರೂಟ್ ಕೈ ಸೇರಿತು. 99 ಬಾಲ್ ಗೆ 66 ರನ್ ಗಳಿಸಿದ್ದ ಕ್ಯಾರಿಯನ್ನ ಜೋ ರೂಟ್ ನ ಬೌಲಿಂಗ್ ಮತ್ತು ಕ್ಯಾಚ್ ಪೆವಿಲಿಯನ್ ಸೇರುವಂತೆ ಮಾಡಿತು.
ಅಲೆಕ್ಸ್ ಕ್ಯಾರಿ ಔಟಾದ ಬಳಿಕ ಇಂಗ್ಲೆಂಡ್ ಗೆಲುವಿಗೆ ಆಶಾದಾಯಕವಾಗಿ ಕಂಡರೂ ಪ್ಯಾಟ್ ಕಮಿನ್ಸ್ ಮತ್ತು ನಾಥನ್ ಲಿಯಾನ್ ನಡುವಿನ ಪಾಲುದಾರಿಕೆ ಆಟ ಆಸ್ಟ್ರೇಲಿಯಾವನ್ನ ಗೆಲುವಿನತ್ತ ಕೊಂಡೊಯ್ಯಿತು. ಮೊದಲ ಆಶಸ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು.
https://twitter.com/englandcricket/status/1671206057304281088?ref_src=twsrc%5Etfw%7Ctwcamp%5Etweetembed%7Ctwterm%5E1671206057304281088%7Ctwgr%5E07bb70b186d049c5077305eb69da0dd388e902f9%7Ctwcon%5Es1_&ref_url=https%3A%2F%2Fsports.ndtv.com%2Fashes-2023%2Fjoe-roots-sensational-catch-off-own-bowling-leaves-everyone-stunned-watch-4138499