ಮನೆಯ ಛಾವಣಿಯಲ್ಲಿ ದೈತ್ಯ ಹಾವುಗಳು: ಮೈ ಝುಂ ಎನ್ನುವ ವಿಡಿಯೋ ವೈರಲ್‌

ಹಾವು ಎಂದರೆ ಬಹುತೇಕ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಹಾವು ಮನೆಯೊಳಕ್ಕೆ, ಗಾಡಿಯ ಒಳಗೆ ಬಂದಿರುವ ಹಲವಾರು ಘಟನೆಗಳು ನಡೆದಿವೆ. ಅಂಥ ಸಂದರ್ಭಗಳಲ್ಲಿ ಹಾವುಗಳನ್ನು ಹಿಡಿಯುವುದನ್ನು ನೋಡುವುದೇ ರೋಚಕ, ಅಷ್ಟೇ ಭಯಾನಕ ಕೂಡ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ.

ವೈರಲ್ ವಿಡಿಯೋವನ್ನು @baju_skoda ಎಂಬುವವರು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಬೆಚ್ಚಿ ಬೀಳುವಂತಿದೆ.

ವಿಡಿಯೋದಲ್ಲಿ ನಾವು ಹಾವು ಹಿಡಿಯುವುದನ್ನು ನೋಡಬಹುದು. ದೈತ್ಯ ಹಾವನ್ನು ಛಾವಣಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೂ ಹಲವಾರು ಸೆಕೆಂಡುಗಳು ಅವು ಕದಲಲಿಲ್ಲ. ನಂತರ ನೋಡಿದರೆ ಒಂದಲ್ಲ ಅಲ್ಲಿ ಇದ್ದುದು ಎರಡು ಭಯಾನಕ ಹಾವುಗಳು. ಇದನ್ನು ನೋಡಿದರೆ ಮೈ ಝುಂ ಎನ್ನುವಂತಿದೆ.

ಈ ವಿಡಿಯೋವನ್ನು ಇದಾಗಲೇ 35 ಮಿಲಿಯನ್‌ಗೂ ಅಧಿಕ ಮಂದಿ ನೋಡಿದ್ದಾರೆ. ಈ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಹಲವರು ಇದನ್ನು ನೋಡಿ ಉಸಿರೇ ನಿಂತುಹೋಯಿತು ಎಂದು ಕಮೆಂಟ್‌ ಮಾಡಿದ್ದಾರೆ.

https://twitter.com/DailyLoud/status/1625147055852199936?ref_src=twsrc%5Etfw%7Ctwcamp%5Etweetembed%7Ctwterm%5E1625147055852199936%7Ctwgr%5Ee870712f14d6aa368b4088271ab1dd16a83b5624%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-rescue-turns-into-trouble-as-2-giant-snakes-fall-from-the-ceiling

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read