ಕಾಶ್ಮೀರದ ಕುರಿತು ಟ್ಯೂಷನ್​ ಮಾಡಿ ವಿವಾದಕ್ಕೆ ಸಿಲುಕಿದ ಖಾನ್​ ಸರ್​

ಪಟ್ನಾ: ಬಿಹಾರದ ಪಟ್ನಾ ಮೂಲದ ಬೋಧಕ ಮತ್ತು ಯೂಟ್ಯೂಬರ್, ಜಿಎಸ್ ಸಂಶೋಧನಾ ಕೇಂದ್ರದ ಖಾನ್ ಸರ್ ಅವರು ಜನಾಂಗೀಯ ಶುದ್ಧೀಕರಣದ ಬಗ್ಗೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರೀಗ ವಿವಾದಕ್ಕೆ ಸಿಲುಕಿದ್ದಾರೆ.

1959ರಲ್ಲಿ ಚೀನಾ ದೇಶವು ಟಿಬೆಟ್ ಅನ್ನು ಹೇಗೆ ವಶಪಡಿಸಿಕೊಂಡಿತು ಮತ್ತು ಕಮ್ಯುನಿಸ್ಟ್ ಆಳ್ವಿಕೆಯ ರಾಷ್ಟ್ರದ ವಿರುದ್ಧ ಟಿಬೆಟಿಯನ್ನರು ಏಕೆ ಪ್ರತಿಭಟಿಸಲು ಅಥವಾ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ಖಾನ್ ಸರ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಚೀನಾವು, ಟಿಬೆಟ್‌ನಲ್ಲಿರುವ ಕುಟುಂಬಗಳನ್ನು ಪ್ರತ್ಯೇಕಿಸಿ ದೇಶದ ವಿವಿಧ ಭಾಗಗಳಿಗೆ ಕಳುಹಿಸಿದೆ ಎಂದು ವಿವರಿಸಿದ್ದಾರೆ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನಂತರ ಅವರು, ಕಾಶ್ಮೀರಿಗಳಿಗೆ ಸರ್ಕಾರವು ಅದೇ ರೀತಿ ಮಾಡಿ ಅವರನ್ನು ಭಾರತದ ವಿವಿಧ ಭಾಗಗಳಿಗೆ ಕಳುಹಿಸಿದರೆ ಕಣಿವೆಯಲ್ಲಿ ಕಲ್ಲು ತೂರಾಟ ಮತ್ತು ಇತರ ಭದ್ರತಾ ಘಟನೆಗಳ ಸುತ್ತಲಿನ ಗದ್ದಲವು ಬಗೆಹರಿಯುತ್ತದೆ ಎಂದು ಖಾನ್ ಸರ್ ಅವರು ಚೀನಾ, ಟಿಬೆಟ್​ಗೆ ಇಲ್ಲಿಯ ಪರಿಸ್ಥಿತಿಯನ್ನು ಹೋಲಿಸಿ ಟೀಕೆಗೆ ಒಳಗಾಗಿದ್ದಾರೆ.

ಇವರ ನಿಜವಾದ ಹೆಸರು ಅಮಿತ್ ಸಿಂಗ್ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ. ಆದಾಗ್ಯೂ, ಕೆಲವರು ಅವರ ಹೆಸರು ಫೈಸಲ್ ಖಾನ್ ಮತ್ತು ಅವರು ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ನಿಜವಾದ ಹೆಸರನ್ನು ಎಂದಿಗೂ ಬಹಿರಂಗಪಡಿಸಿಲ್ಲ ಮತ್ತು ಹೆಚ್ಚಿನ ಜನರು ಅವರನ್ನು ಖಾನ್ ಸರ್ ಎನ್ನುತ್ತಿದ್ದಾರೆ. ಆದರೆ ಕಾಶ್ಮೀರದ ಬಗೆಗಿನ ಹೋಲಿಕೆಗೆ ಇವರ ವಿರುದ್ಧ ಹಲವಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.

https://www.youtube.com/watch?time_continue=3&v=WJD6KyfAxNo&embeds_euri=https%3A%2F%2Fwww.freepressjournal.in%2F&source_ve_path=Mjg2NjY&feature=emb_logo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read