ಡಿಜಿಟಲ್ ಡೆಸ್ಕ್ : ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ.
ದೇವಾಲಯದ ಶಿವಲಿಂಗದ ಸುತ್ತಲೂ ಹಾವು ಸುತ್ತುತ್ತಿರುವುದು ಕಂಡುಬಂದಿದ್ದು, ಭಕ್ತರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಾಳ ಗಂಗಾದಲ್ಲಿರುವ ದೇವಾಲಯದಿಂದ ಈ ವೀಡಿಯೊ ಬಂದಿದೆ. ಈ ಕ್ಲಿಪ್ ಅನ್ನು ದೇವಾಲಯದ ಕೆಲವು ಭಕ್ತರು ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಶೈಲದ ಪಾತಾಳ ಗಂಗೆಯಲ್ಲಿ ಚಂದ್ರಲಿಂಗೇಶ್ವರ ಸ್ವಾಮಿಯ ಪುರಾತನ ದೇವಾಲಯವಿದ್ದು, ಅಲ್ಲಿ ಪ್ರತಿದಿನ ಭಕ್ತರು ಪೂಜೆ ಸಲ್ಲಿಸುತ್ತಾರೆ. ಪೂಜೆ ಸಲ್ಲಿಸಿದ್ದ ಬಳಿಕ ದೇವಾಲಯವೊಂದರಲ್ಲಿ ಬೃಹತ್ ಕಾಳಿಂಗ ಶಿವನ ಲಿಂಗವನ್ನು ಸುತ್ತು ಹಾಕಿದೆ ಎನ್ನಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
శ్రీశైలం పాతాళ గంగ వద్ద వెలసిన చంద్ర లింగానికి చుట్టుకున్న నాగుపాము#saynotodrugs #srisailam #lordshiva #snake #bigtv pic.twitter.com/zKZ5hiojCf
— BIG TV Breaking News (@bigtvtelugu) July 16, 2024