ರೈಲು ಹಳಿಗಳ ಮೇಲೆ ಸಿಲುಕಿದ್ದ ನಾಯಿಯನ್ನು ರೈಲ್ವೆ ನಿಲ್ದಾಣದ ಸಿಬ್ಬಂದಿ ರಕ್ಷಿಸಿದ ಘಟನೆಯು ಮುಂಬೈನ ಬಾಂದ್ರಾ ಟರ್ಮಿನಸ್ ಬಳಿಯಲ್ಲಿ ಸಂಭವಿಸಿದೆ. ರೈಲು ಬರಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ ಇರುವಾಗಲೇ ನಾಯಿಯನ್ನು ಅಪಾಯದಿಂದ ಪಾರು ಮಾಡಲಾಯ್ತು.
ರೈಲು ಹಳಿಗಳನ್ನು ನಿರ್ವಹಿಸಲು ಬಳಸುವ ಉಪಕರಣಗಳನ್ನು ಬಳಕೆ ಮಾಡಿ ಕಾರ್ಮಿಕರು ಟ್ರ್ಯಾಕ್ ನಡುವಿನ ಅಂತರವನ್ನು ಹೆಚ್ಚಿಸುವ ಮೂಲಕ ಶ್ವಾನವನ್ನು ರಕ್ಷಿಸಿದ್ದಾರೆ.
ಶ್ವಾನವನ್ನು ಅಪಾಯದಿಂದ ಪಾರು ಮಾಡುವ ಮೂಲಕ ಅದರ ಜೀವವನ್ನು ಉಳಿಸಿದ್ದಾರೆ. ಟ್ರ್ಯಾಕ್ನಲ್ಲಿ ಸಿಲುಕಿಕೊಂಡಿದ್ದ ಶ್ವಾನದ ಪಾದವನ್ನು ಬಿಡಿಸುತ್ತಿದ್ದಂತೆಯೇ ಶ್ವಾನವು ಸ್ಥಳದಿಂದ ಓಡಿ ಹೋಗಿದೆ.
ಶ್ವಾನ ರಕ್ಷಣಾ ಕಾರ್ಯಾಚರಣೆಯನ್ನು ಸಂಪೂರ್ಣ ವಿಡಿಯೋ ಮಾಡಲಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
https://twitter.com/i/status/1671155813086564356