Watch | ಇನ್ನೂ ಸಮಯವಿದೆ, ನೀನು ಮದುವೆಯಾಗು; ರಾಹುಲ್ ಗಾಂಧಿಗೆ ಲಾಲು ಸಲಹೆ

Still not too late to get married': Lalu Prasad Yadav makes a wisecrack at Rahul Gandhi at Patna meet | India News,The Indian Express

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನ ಮದುವೆಯಾಗುವಂತೆ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲಹೆ ನೀಡಿದ್ದಾರೆ. ಪಾಟ್ನಾದಲ್ಲಿ ಜರುಗಿದ ವಿಪಕ್ಷಗಳ ಮೆಗಾ ಸಭೆ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಲಾಲುಪ್ರಸಾದ್ ಯಾದವ್ ಪ್ರಶ್ನೆಗೆ ದೊಡ್ಡ ನಗುವಿನ ವಾತಾವರಣ ಉಂಟಾಯಿತು.

ಲಾಲು ಪ್ರಸಾದ್ ಯಾದವ್ ಮಾತನಾಡುತ್ತಾ, ರಾಹಲ್ ಗಾಂಧಿಗೆ ಮದುವೆಯಾಗು, ನಿಮ್ಮ ಮದುವೆಯ ಮೆರವಣಿಗೆಯ ಭಾಗವಾಗಲು ನಾವು ಬಯಸುತ್ತೇವೆ ಎಂದರು.

53ವರ್ಷ ವಯಸ್ಸಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಈಗ, ನೀವು ಹೇಳಿದ್ದೀರಿ, ಅದು ಆಗುತ್ತದೆ” ಎಂದರು. ಮದುವೆಯಾಗು ಇನ್ನೂ ಸಮಯವಿದೆ, ನೀನು ನಿಮ್ಮ ತಾಯಿಯ ಮಾತು ಕೇಳುವುದಿಲ್ಲ ಎಂದು ಅವರು ನನಗೆ ಹೇಳಿದರು. ಈಗಲೇ ಹೇಳಿ, ನಮ್ಮ ಮಾತು ಕೇಳಿ ಎಂದು ಲಾಲು ಯಾದವ್ ರಾಹುಲ್ ಗಾಂಧಿಯನ್ನ ಒತ್ತಾಯಿಸಿದರು.

ಈ ವರ್ಷದ ಜನವರಿಯಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಒಳ್ಳೆಯ ಹುಡುಗಿ ಸಿಕ್ಕಾಗ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದರು.

ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗುಣಗಳನ್ನು ತಮ್ಮ ಸಂಗಾತಿ ಹೊಂದಿರಬೇಕೆಂದು ಬಯಸುವುದಾಗಿ ಹೇಳಿದ್ದರು.

https://twitter.com/PTI_News/status/1672214609363714049?ref_src=twsrc%5Etfw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read