Viral Video | ಅವಧಿ ಮೀರಿದರೂ ಮುಂದುವರೆದ ಸಂಗೀತ ಕಾರ್ಯಕ್ರಮ; ಸ್ಥಗಿತಗೊಳಿಸಲು ಎ.ಆರ್. ರೆಹಮಾನ್‌ಗೆ ಪೊಲೀಸರ ತಾಕೀತು

ಎ.ಆರ್. ರೆಹಮಾನ್ ಅವರ ಸಂಗೀತ ಮಾಂತ್ರಿಕ ಶಕ್ತಿಗೆ ಮನಸೋಲದವರೇ ಯಾರೂ ಇಲ್ಲ. ಆದರೆ ಎಲ್ಲಾದರೂ ಅವರ ಕಾರ್ಯಕ್ರಮ ಇದೆ ಅಂದರೆ ಸಾಕು, ಅಲ್ಲಿ ಅಭಿಮಾನಿಗಳ ನೂಕುನುಗ್ಗಲು ಇದ್ದೇ ಇರುತ್ತೆ.

ಕೆಲವೊಮ್ಮೆಯಂತೂ ಅಂದಾಜಿಗೆ ಮೀರಿ ಜನ ಸೇರಿರುತ್ತಾರೆ. ಆಗ ಅವರನ್ನ ಸಂಭಾಳಿಸುವುದೇ ಕಾರ್ಯಕ್ರಮ ಆಯೋಜಕರ ದೊಡ್ಡ ಸವಾಲು.

ಪುಣೆಯಲ್ಲೂ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದ ಪುಣೆ ಪೊಲೀಸರು ಅಲ್ಲಿದ್ದವರೆಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಪೂರ್ವ ನಿಗದಿತ ಸಂಗೀತ ಕಾರ್ಯಕ್ರಮದ ಸಮಯ ಮೀರಿದರೂ, ಎ.ಆರ್. ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ ಎಂಟ್ರಿ ಕೊಟ್ಟ ಪುಣೆ ಪೊಲೀಸ್ ಕಾರ್ಯಕ್ರಮವನ್ನ ನಿಲ್ಲಿಸುವುದಕ್ಕೆ ತಾಕೀತು ಮಾಡಿದ್ದಾರೆ.

ಪೊಲೀಸರು ಕೊಟ್ಟ ವಾರ್ನಿಂಗ್‌ಗೆ ಎ.ಆರ್. ರೆಹಮಾನ್ ತಮ್ಮ ಮ್ಯೂಸಿಕ್ ಬ್ಯಾಂಡ್‌ನ ಇತರೆ ಸದಸ್ಯರಿಗೆ ತಕ್ಷಣವೇ ಗೋಷ್ಠಿಯನ್ನ ನಿಲ್ಲಿಸುವಂತೆ ಹೇಳಿದ್ದಾರೆ.

ಆದರೂ ಈ ಸಂಗೀತ ಕಾರ್ಯಕ್ರಮ ಭರ್ಜರಿ ಯಶಸ್ಸನ್ನ ಪಡೆದಿದೆ. ಪುಣೆಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ ರೀತಿಯನ್ನ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ಅವರಿಗೆ ಇಷ್ಟು ಪ್ರೀತಿ ತೋರಿಸಿದ್ದಕ್ಕೆ ಧನ್ಯವಾದವನ್ನ ಕೂಡ ತಿಳಿಸಿದ್ದಾರೆ.

https://twitter.com/fpjindia/status/1652956647088848899?ref_src=twsrc%5Etfw%7Ctwcamp%5Etweetembed%7Ctwterm%5E1652956647088848899%7Ctwgr%5E8253c5853db2e25b42063070bd82e9a0945d6f24%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fbollywood%2Fwatch-pune-police-stop-ar-rahmans-concert-midway-after-singer-performs-in-silent-zone

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read