ಹ್ಯಾಂಡ್ ಶೇಕ್ ಮಾಡಲು ಆಟಗಾರ್ತಿ ಬಂದಾಗಲೇ ಎಡವಟ್ಟು…! ಶಾಕಿಂಗ್‌ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ನಕ್ಕುನಲಿಸುವ ವಿಡಿಯೋಗಳಿಗೇನೂ ಕೊರತೆ ಇಲ್ಲ. ಇಂಥದ್ದೇ ಒಂದು ವಿಡಿಯೋದಲ್ಲಿ ತನ್ನ ಅಭಿಮಾನಿಗಳನ್ನು ಭೇಟಿಯಾಗಲು ಗ್ಯಾಲರಿಯತ್ತ ಹೊರಟ ಆಟಗಾರ್ತಿಯೊಬ್ಬಳಿಗೆ ಬ್ಯಾರಿಕೇಡ್ ಮುರಿದ ಕಾರಣ ಏನಾಯಿತೆಂದು ಸೆರೆ ಹಿಡಿಯಲಾಗಿದೆ.

ಫೇಲ್ ಆರ್ಮಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ಆಟಗಾರರು ಹಾಗೂ ವೀಕ್ಷಕರು ನೆರೆದಿದ್ದ ಆಡಿಟೋರಿಯಂ‌ ಅನ್ನು ಕಾಣಬಹುದಾಗಿದೆ. ಭಾರೀ ಎನರ್ಜಿಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಕೈಕುಲುಕಲು ಆಟಗಾರ್ತಿಯೊಬ್ಬಳು ಅವರತ್ತ ತೆರಳಿದ್ದಾಳೆ.

ಮೆಚ್ಚಿನ ಆಟಗಾರ್ತಿ ತಮ್ಮತ್ತ ಬಂದಿದ್ದನ್ನು ಕಂಡ ಕೂಡಲೇ ಅಭಿಮಾನಿಗಳು ಹ್ಯಾಂಡ್‌ ಶೇಕ್‌ ಗೆ ಮುಗಿಬಿದ್ದಿದ್ದು, ಸೆಕೆಂಡ್‌ಗಳಲ್ಲೇ ಬ್ಯಾರಿಕೇಡ್ ಅನ್ನು ಮುರಿದುಬಿಟ್ಟಿದ್ದಾರೆ. ಕೂಡಲೇ ಮುಂದಿನ ಸಾಲಿನಲ್ಲಿದ್ದ ಪ್ರೇಕ್ಷಕರು ಆಟದಂಗಳಕ್ಕೆ ಬಿದ್ದರೆ, ಕೂದಲೆಳೆ ಅಂತರದಿಂದ ಆಟಗಾರ್ತಿ ಇದರಿಂದ ಪಾರಾಗಿ ಆಟದ ಜಾಗಕ್ಕೆ ಮರಳಿದ್ದಾರೆ.

https://youtu.be/6FecffJ24oI

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read