Viral Video | ಮದುವೆ ಶಾಸ್ತ್ರಕ್ಕೆ ’ಮನಿ ಹೀಸ್ಟ್‌’ ಟ್ವಿಸ್ಟ್ ಕೊಟ್ಟ ವಧು ಸಹೋದರ

ದೇಸೀ ಮದುವೆಗಳಲ್ಲಿ ಪ್ರತಿಯೊಂದು ಶಾಸ್ತ್ರದ ವೇಳೆಯೋ ಮೋಜಿಗೇನೂ ಕಮ್ಮಿ ಇಲ್ಲ. ಮದುಮಗನ ಪಾದರಕ್ಷೆಗಳನ್ನು ಬಚ್ಚಿಟ್ಟು ದುಡ್ಡು ಕೊಟ್ಟರೆ ಮಾತ್ರ ಅವುಗಳನ್ನು ಮರಳಿ ಕೊಡುವುದಾಗಿ ಮದುಮಗಳ ಸಹೋದರಿಯರು ಆಟವಾಡಿಸುವ ’ಝೂತಾ ಛುಪಾಯಿ’ ಹೆಸರಿನ ಶಾಸ್ತ್ರವೊಂದಕ್ಕೆ ಪಾಕಿಸ್ತಾನೀ ಮದುವೆಯೊಂದರಲ್ಲಿ ಟ್ವಿಸ್ಟ್ ಕೊಡಲಾಗಿದೆ.

ಫನ್ನಿ ಮುಖವಾಡ ಧರಿಸಿಕೊಂಡು ದಿಢೀರ್‌ ಎಂದು ಓಡಿ ಬರುವ ಮದುಮಗಳ ಸಹೋದರ ಹಸೆ ಮಣೆ ಮೇಲಿದ್ದ ಮದುಮಗನ ಪಾದರಕ್ಷೆಗಳನ್ನು ಕಿತ್ತುಕೊಂಡು ಹಾಗೇ ಅತಿಥಿಗಳಿದ್ದ ಜಾಗಕ್ಕೆ ಆಗಮಿಸಿ ’ಬೆಲ್ಲಾ ಸಿಯಾವೋ’ ಹಾಡಿನ ಟ್ಯೂನ್‌ಗೆ ಸಖತ್‌ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಮದುಮಗಳು ವಾರ್ದಾ ಸಿಕಂದರ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ನನ್ನ ಮದುವೆ ಸಂದರ್ಭದಲ್ಲಿ ಯಾವುದನ್ನೂ ಸಹ ಸರಳವಾಗಿ ಇಡುವುದು ನನಗೆ ಬೇಕಿರಲಿಲ್ಲ. ಹಾಗಾಗಿ ನಾನು ಮತ್ತು ನನ್ನ ಸಹೋದರಿ ಈ ಝೂತಾ ಹೀಸ್ಟ್ ಐಡಿಯಾ ಮಾಡಿದ್ದೇವೆ. ಅಮೇಜ಼ಾನ್‌ನಲ್ಲಿ ಮನಿ ಹೀಸ್ಟ್ ಕಾಸ್ಟ್ಯೂಮ್ ಖರೀದಿ ಮಾಡಲು ನನ್ನ ಸಹೋದರನಿಗೆ ತಿಳಿಸಿದೆ. ಆತ ಇಡೀಯ ದೃಶ್ಯವನ್ನು ತಾಲೀಮು ಮಾಡಿದ್ದ. ಮದುವೆಗೆ ಆಗಮಿಸಿದ್ದ ಪ್ರತಿಯೊಬ್ಬರು ಇದನ್ನು ಭಾರೀ ಎಂಜಾಯ್ ಮಾಡಿದ್ದಾರೆ,” ಎಂದು ತಿಳಿಸಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿ, “ಝೂತಾ ಛುಪಾಯಿಯನ್ನು ಇನ್ನಷ್ಟು ಮನರಂಜನಾತ್ಮಕವಾಗಿ ಮಾಡಲು, ಝೂತಾ ಹೀಸ್ಟ್,” ಎಂದು ವಿಡಿಯೋದಲ್ಲಿ ಕ್ಯಾಪ್ಷನ್ ಹಾಕಲಾಗಿದೆ.

https://youtu.be/VGvBbScg700

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read