ಪ್ರವಾಸಕ್ಕೆ ತೆರಳುತ್ತಿದ್ದ ಮಹಾರಾಷ್ಟ್ರದ ಖಾಸಗಿ ಶಾಲೆಯೊಂದರ ಬಸ್ ಬ್ರೇಕ್ ಫೇಲ್ಯೂರ್ ಆಗಿ ಕೂದಲೆಳೆ ಅಂತರದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಶಾಲಾ ಪಿಕ್ನಿಕ್‌ಗಾಗಿ ಪುಣೆ ಜಿಲ್ಲೆಯ ಬಾರಾಮತಿಯ ಮೋರ್ಗಾಂವ್‌ಗೆ ಕರೆದೊಯ್ಯಲಾಗುತ್ತಿತ್ತು. ಪುಣೆಯ ಭೋರ್‌ನಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ 34 ವಿದ್ಯಾರ್ಥಿಗಳಿದ್ದರು.
ಬ್ರೇಕ್ ಕೆಲಸ ಮಾಡುತ್ತಿಲ್ಲ ಎಂದು ತಿಳಿದ ಕೂಡಲೇ ಬಸ್ ಚಾಲಕ ರಸ್ತೆಯಲ್ಲಿದ್ದ ಜನರನ್ನು ಎಚ್ಚರಿಸಿ ಚಲಿಸುತ್ತಿದ್ದ ವಾಹನದಿಂದ ಜಿಗಿದಿದ್ದಾನೆ. ನಂತರ ಬಸ್ ಟೈರ್ ಒಂದರ ಬಳಿ ಕಲ್ಲು ಇಟ್ಟು ನಿಲ್ಲಿಸಿದ್ದಾರೆ.
ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.
https://twitter.com/shivanipandhar1/status/1622151708880273413?ref_src=twsrc%5Etfw%7Ctwcamp%5Etweetembed%7Ctwterm%5E1622151708880273413%7Ctwgr%5Ec8d9807edcdcf8c8dec925cf51d2c898f9696d0a%7Ctwcon%5Es1_&ref_url=https%3A%2F%2Fmarathi.abplive.com%2Fnews%2Fpune%2Fover-30-students-on-way-to-picnic-have-narrow-escape-after-bus-suffers-break-failure-in-pune-1148738