ರಿಂಗ್‌ನಲ್ಲೇ ಕುಸಿದು ಬಿದ್ದ ಬಾಕ್ಸರ್: ನೈಜೀರಿಯಾದ ಗೇಬ್ರಿಯಲ್ ಸಾವು

ನೈ

ನೈಜೀರಿಯಾದ ಬಾಕ್ಸರ್ ಗೇಬ್ರಿಯಲ್ ಒಲುವಾಸೆಗುನ್ ಒಲನ್ರೆವಾಜು (Gabriel Olusegun Olanrewaju) ಬಾಕ್ಸಿಂಗ್ ರಿಂಗ್‌ನಲ್ಲೇ ಕುಸಿದು ಬಿದ್ದು ಸತ್ತಿದ್ದಾರೆ. ಅಕ್ರಾದ ಬುಕೋಮ್ ಬಾಕ್ಸಿಂಗ್ ಅರೆನಾದಲ್ಲಿ (Bukom Boxing Arena) ಎಂಟು ಸುತ್ತಿನ ಲೈಟ್ ಹೆವಿವೇಯ್ಟ್ (Light Heavyweight) ಬಾಕ್ಸಿಂಗ್ ಪಂದ್ಯದ ಮೂರನೇ ಸುತ್ತಿನಲ್ಲಿ ಈ ಘಟನೆ ನಡೆದಿದೆ.

ಗೇಬ್ರಿಯಲ್ ಒಲುವಾಸೆಗುನ್ ಒಲನ್ರೆವಾಜು ಘಾನಾದ ಜಾನ್ ಎಂಬಾನುಗು (John Embanugu) ವಿರುದ್ಧ ಬಾಕ್ಸಿಂಗ್ ಪಂದ್ಯ ಆಡುತ್ತಿದ್ದರು. ಮೂರನೇ ಸುತ್ತಿನಲ್ಲಿ ಅವರು ಎದುರಾಳಿಯೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಹಗ್ಗಗಳ ಮೇಲೆ ಬಿದ್ದರು. ಇದನ್ನು ನೋಡಿದ ರೆಫರಿ ರಿಚರ್ಡ್ ಅಮೆವಿ (Richard Amevi) ಕೂಡಲೇ ಪಂದ್ಯವನ್ನು ನಿಲ್ಲಿಸಿದರು. ವೈದ್ಯರು ಮತ್ತು ಇಎಂಎಸ್ ಸಿಬ್ಬಂದಿ (EMS Staff) ಸಿಪಿಆರ್ ಸೇರಿದಂತೆ ಅಗತ್ಯ ವೈದ್ಯಕೀಯ ನೆರವು ನೀಡಿದರು. ಆದರೆ, ಅದು ಸಾಲಲಿಲ್ಲ.

ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ 30 ನಿಮಿಷಗಳ ನಂತರ ಅವರು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಾನಾ ಬಾಕ್ಸಿಂಗ್ ಪ್ರಾಧಿಕಾರವು (Ghana Boxing Authority) ಈ ಸಾವನ್ನು ಖಚಿತಪಡಿಸಿದೆ. ಪಂದ್ಯದ ಮೊದಲು, ಎನ್‌ಬಿಬಿಸಿ (NBBC) ಜಾನ್ ಎಂಬಾನುಗು ವಿರುದ್ಧ ಸ್ಪರ್ಧಿಸಲು ಅವರಿಗೆ ವೈದ್ಯಕೀಯ ಅನುಮತಿ ನೀಡಿತ್ತು.

ನೈಜೀರಿಯಾ ಬಾಕ್ಸಿಂಗ್ ಬೋರ್ಡ್ ಆಫ್ ಕಂಟ್ರೋಲ್‌ನ (Nigeria Boxing Board of Control) ಪ್ರಧಾನ ಕಾರ್ಯದರ್ಶಿ ರೆಮಿ ಅಬೊಡೆರಿನ್ (Remi Aboderin) ಅವರು ಗೇಬ್ರಿಯಲ್ ಒಲುವಾಸೆಗುನ್ ಒಲನ್ರೆವಾಜು ಅವರ ಹಠಾತ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read