ಬೃಹತ್ ಜನಸಮೂಹದೊಂದಿಗೆ ಸಂಭ್ರಮದಿಂದ ಹೋಳಿ ಆಡಿದ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್

ಆಕ್ಲೆಂಡ್: ನ್ಯೂಜಿಲೆಂಡ್ ಪ್ರಧಾನಿ ಆಕ್ಲೆಂಡ್‌ ನ ಇಸ್ಕಾನ್‌ನಲ್ಲಿ ಬೃಹತ್ ಜನಸಮೂಹದೊಂದಿಗೆ ಹೋಳಿ ಆಡಿದ್ದಾರೆ. ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಹೋಳಿಯನ್ನು ಆನಂದಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

3.. 2..1 ರ ಕೌಂಟ್‌ಡೌನ್‌ನೊಂದಿಗೆ ಪ್ರಧಾನಿ ಜನಸಮೂಹದ ಮೇಲೆ ಹೋಳಿ ಬಣ್ಣಗಳನ್ನು ಎರಚುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಬಣ್ಣಗಳ ಹಬ್ಬ ಹೋಳಿ ವಸಂತಕಾಲದ ಆಗಮನ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಜೀವನದ ಸಂತೋಷವನ್ನು ಆಚರಿಸಲು ಜನರು ಒಟ್ಟಾಗಿ ಸೇರುವ ಸಮಯವಾಗಿದೆ. ಹೋಳಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಅವರು, ಬೃಹತ್ ಜನಸಮೂಹದ ಮೇಲೆ ಬಣ್ಣಗಳನ್ನು ಎರಚಿದ್ದಾರೆ.

ಭಾರತವು ಹಲವಾರು ದೇಶಗಳೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುತ್ತಿದ್ದಂತೆ, ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳನ್ನು ಆಚರಿಸಲು ವಿದೇಶಿಯರಲ್ಲಿ ಒಲವು ಹೆಚ್ಚುತ್ತಿದೆ. ಎಲ್ಲೆಡೆ ಸಂಭ್ರಮದಿಂದ ಹೋಳಿ ಆಚರಿಸಲಾಗಿದ್ದು, ನ್ಯೂಜಿಲೆಂಡ್ ಪ್ರಧಾನಿ ಕೂಡ ಭಾಗಿಯಾಗಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸುತ್ತಾರೆ ಮತ್ತು ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸಲು ಮಾರ್ಚ್ 16 ರಿಂದ 20 ರವರೆಗೆ ಭಾರತಕ್ಕೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read