Viral Video | ಆಕಾಶದಲ್ಲಿ ಗಮನ ಸೆಳೆದ ಅಣಬೆ ಆಕಾರದ ಮೋಡ : ಬೆರಗಾದ ನೆಟ್ಟಿಗರು

ಅಣುಬಾಂಬ್​ ಸ್ಫೋಟಗೊಂಡ ರೀತಿಯ ಮೋಡದ ಆಕಾರದ ಚಂಡಮಾರುತವೊಂದು ಅಮೆರಿಕದ ಒಕ್ಲಹೋಮ ಎಂಬಲ್ಲಿ ಕಾಣಿಸಿಕೊಂಡಿದೆ. ಕಿತ್ತಳೆ ಬಣ್ಣದ ಈ ಮೋಡದ ಆಕೃತಿಯು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಈ ಮೋಡ ಅಣಬೆ ಆಕಾರದಲ್ಲಿ ಇದೆ ಎಂದು ಹೇಳ್ತಿದ್ದಾರೆ.

ಪರಮಾಣು ಸ್ಫೋಟವಾದಾಗ ಯಾವ ರೀತಿಯ ಚಿತ್ರಣ ಇರುತ್ತದೆಯೋ ಈ ಮೋಡ ಕೂಡ ಅದೇ ರೀತಿಯ ಆಕಾರವನ್ನು ಹೊಂದಿದೆ. ನಾರ್ಮ್​ನಲ್ಲಿ ಕಂಡು ಬಂದ ಅತ್ಯದ್ಭುತ ಮೋಡದ ಆಕೃತಿಯಿದು ಎಂದು ಟ್ವಿಟರ್​ನಲ್ಲಿ ಈ ಮೋಡದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಅಮೆರಿಕದ ಹವಾಮಾನ ಮುನ್ಸೂಚಕರು ನೀಡಿರುವ ಮಾಹಿತಿಯ ಪ್ರಕಾರ, ಇಲ್ಲಿ ಉಂಟಾದ ಚಂಡಮಾರುತದಿಂದಾಗಿ ಸೆಮಿನೋಲ್​ ಕೌಂಟಿ ಎಂಬಲ್ಲಿ ಬೇಸ್​ಬಾಲ್​ಗಳಿಗಿಂತಲೂ ದೊಡ್ಡದಾದ ಆಲಿಕಲ್ಲು ಮಳೆ ಉಂಟಾಗಿದೆ. ಇದರ ಜೊತೆಯಲ್ಲಿ ಇದೀಗ ಈ ಅಣಬೆ ಆಕಾರದ ಮೋಡ ಕೂಡ ಸಖತ್​ ಸದ್ದು ಮಾಡ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read