ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ವೇಳೆ ಜಿಮ್ ನಲ್ಲಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸಂಭ್ರಮಿಸಿದ್ದಾರೆ.
ಭಾರತವು ತಮ್ಮ ಚಂದ್ರಯಾನ-3 ಯೋಜನೆಯೊಂದಿಗೆ ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಮೊದಲ ದೇಶವಾಯಿತು. ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್(CSK) ನಾಯಕ ಎಂ.ಎಸ್. ಧೋನಿ ಅವರೂ ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ನೀಲಿ ಟ್ಯಾಂಕ್ ಟಾಪ್ ಮತ್ತು ಜಿಮ್ ಶಾರ್ಟ್ಸ್ ನಲ್ಲಿ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಲ್ಯಾಂಡಿಂಗ್ ಅನ್ನು ಎಂ.ಎಸ್. ಧೋನಿ ಶ್ಲಾಘಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಿಂದಿನ ದಿನ ಅವರ ಪತ್ನಿ ಸಾಕ್ಷಿ ಧೋನಿ ಅವರು ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಝಿವಾ ಧೋನಿ ಲ್ಯಾಂಡಿಂಗ್ ಅನ್ನು ಆಚರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಎಂಎಸ್ ಧೋನಿ, ಚಂದ್ರಯಾನ-3 ಕಾರ್ಯಕ್ರಮದ ಸಮಯದಲ್ಲಿ ಜಿಮ್‌ನಲ್ಲಿದ್ದರು.
ಧೋನಿ ಹೊರತಾಗಿ, ಭಾರತೀಯ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದು, ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ.
https://twitter.com/CricCrazyJohns/status/1694413827272823173
https://twitter.com/sachin_rt/status/1694335930939916355
https://twitter.com/imVkohli/status/1694339035496607772