ಆಹಾರ ಸ್ವೀಕರಿಸಲು ಮರಿ ಮಂಗನಿಗೆ ಅಮ್ಮನಿಂದ ಅಡ್ಡಿ: ಕ್ಯೂಟ್​ ವಿಡಿಯೋ ವೈರಲ್​

ಹಲವು ಪ್ರಾಣಿಗಳನ್ನು ನೋಡಿದಾಗ ಮನುಷ್ಯರಿಗೂ ಅವಕ್ಕೂ ಏನೂ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಅದರಲ್ಲಿಯೂ ಮಂಗನ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ. ಮಂಗನಿಂದ ಮಾನವ ಎನ್ನುವುದು ನಿಜವೇ ಎನ್ನುವಂತೆ ಮಂಗಗಳಿಗೂ ಮನುಷ್ಯರಿಗೂ ಬಹಳ ನಂಟಿದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಈಗ ವೈರಲ್​ ಆಗಿರುವ ವಿಡಿಯೋದಲ್ಲಿ ಕೋತಿಯು ತನ್ನ ಮಗುವಿಗೆ ಅಪರಿಚಿತರಿಂದ ಆಹಾರವನ್ನು ತೆಗೆದುಕೊಳ್ಳದಂತೆ ತಡೆಯುವುದನ್ನು ನೋಡಬಹುದು. ದೊಡ್ಡವರು ಚಿಕ್ಕಮಕ್ಕಳಿಗೆ ತಡೆಯುವಂತೆ ತಾಯಿ ಮಂಗ, ಮರಿ ಮಂಗವನ್ನು ತಡೆಯುವುದುನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಪರಿಚಿತರಿಂದ ವಿಶೇಷವಾಗಿ ತಿನ್ನಬಹುದಾದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಅಮ್ಮಂದಿರು ಕಲಿಸಿದಂತೆ ಇಲ್ಲಿಯೂ ಮಂಗ ಮಾಡಿದೆ.

ಈ ಸಂಬಂಧಿತ ವೀಡಿಯೊವನ್ನು ಜನವರಿ 22 ರಂದು ಹಂಚಿಕೊಳ್ಳಲಾಗಿದೆ. “ಮಂಗ ತನ್ನ ಮಗುವಿಗೆ ಅಪರಿಚಿತರಿಂದ ಆಹಾರವನ್ನು ಸ್ವೀಕರಿಸದಂತೆ ಕಲಿಸುತ್ತದೆ” ಎಂದು ಶೀರ್ಷಿಕೆ ನೀಡಲಾಗಿದೆ. ವೀಡಿಯೊದಲ್ಲಿ, ಅಪರಿಚಿತರು ಮರಿ ಕೋತಿಗೆ ಹಣ್ಣನ್ನು ನೀಡುತ್ತಾರೆ, ಅದು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಅದರ ತಾಯಿ ಮಗುವನ್ನು ಹಿಂದಕ್ಕೆ ಎಳೆಯುತ್ತದೆ. ಹೀಗೆ ಅನೇಕ ಬಾರಿ ಮಾಡುವುದನ್ನು ಕಾಣಬಹುದು. ಅದಕ್ಕೇ ಹೇಳುವುದು ಯಾರೇ ಆಗಲಿ ತಾಯಿ ತಾಯಿಯೇ.

https://youtu.be/3qJUT3m1y0w

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read