ಟಾಪ್ ಮಾಡೆಲ್ ಮಿಲಿಂದ್ ಸೋಮನ್ ಮತ್ತು ಭಾರತದಲ್ಲಿನ ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಮುಂಬೈನಲ್ಲಿ ಪುಷ್ಅಪ್ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಮಿಲಿಂದ್ ಅವರು ಮುಂಬೈ ಮ್ಯಾರಥಾನ್‌ಗೆ ಮುನ್ನ ಪುಶ್‌ಅಪ್‌ಗಳನ್ನು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಕುರಿತು ವಿವರಗಳನ್ನು ಬಹಿರಂಗಪಡಿಸಿದ ನಟ, “ಮುಂಬೈ ಮ್ಯಾರಥಾನ್‌ನಲ್ಲಿ ಚಿತ್ರವನ್ನು ತೆಗೆದುಕೊಳ್ಳುವ ಮೊದಲು ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಅವರೊಂದಿಗೆ 20 ಪುಷ್ಅಪ್‌ಗಳು ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
“ಜನರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂದರೆ ಏಕೈಕ ಆಸಕ್ತಿದಾಯಕ ಮಾರ್ಗವಾಗಿರುವುದು ಪುಷ್ಅಪ್” ಎಂದಿದ್ದಾರೆ ಮಿಲಿಂದ್.
ಮಿಲಿಂದ್ ಮತ್ತು ಅಬ್ದುಲ್ನಾಸರ್ ಪುಶ್-ಅಪ್ ವ್ಯಾಯಾಮವನ್ನು ಸಂಪೂರ್ಣವಾಗಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಈ ವೀಡಿಯೊವನ್ನು ನೋಡಿದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೆಲ್ಫಿಗಾಗಿ ಪುಶ್‌ಅಪ್ ಮಾಡುವ ಕಲ್ಪನೆಯಿಂದ ಆಸಕ್ತಿ ಹೊಂದಿರುವಂತೆ ಕಾಣಿಸುತ್ತದೆ ಎಂದು ಮಿಲಿಂದ್ ಬರೆದುಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಗಳು ಬಂದಿವೆ.
https://twitter.com/milindrunning/status/1616389898763923456?ref_src=twsrc%5Etfw%7Ctwcamp%5Etweetembed%7Ctwterm%5E1616389898763923456%7Ctwgr%5E16fa6d43ec0f4f3381a5ef752954bebcdb5fc4ef%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-milind-soman-asks-uae-ambassador-to-do-20-pushups-with-him-for-a-selfie-6883861.html