ʼನಾಟು ನಾಟುʼ ಹಾಡಿಗೆ ಸಿಬ್ಬಂದಿ ಜೊತೆ ಮ್ಯಾನೇಜರ್​ ಭರ್ಜರಿ ಸ್ಟೆಪ್​: ನಿಮ್ಮ ಕಂಪನಿಯಲ್ಲಿ ಕೆಲಸ ಖಾಲಿ ಇದೆಯಾ ಎಂದ ನೆಟ್ಟಿಗರು

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ವೈಬ್ಸ್ ನೆಟಿಜನ್‌ಗಳನ್ನು ಇಂದಿಗೂ ಸೆಳೆಯುತ್ತಿದೆ. ಆಸ್ಕರ್​ ಪ್ರಶಸ್ತಿ ಪಡೆದ ಬಳಿಕ ಈ ಹಾಡಿನ ಕ್ರೇಜ್​ ಹೆಚ್ಚಾಗಿದೆ. ಹಲವರು ರೀಲ್ಸ್​ಗಳನ್ನು ಮಾಡಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಕಂಪೆನಿಯೊಂದರ ಮ್ಯಾನೇಜರ್​ ಮತ್ತು ಸಿಬ್ಬಂದಿ ಈ ಹಾಡಿಗೆ ನರ್ತಿಸಿದ್ದಾರೆ. ‘ಮ್ಯಾನೇಜರ್ vs ಟೀಮ್ ಮೆಂಬರ್ಸ್’ ಈ ಹಾಡಿಗೆ ರೀಲ್ಸ್​ ಮಾಡಿ ಕಿಚ್ಚೆಬ್ಬಿಸಿದ್ದಾರೆ.

ಈ ವಿಡಿಯೋದಲ್ಲಿ ಸುಮಾರು 6-7 ಜನರು ಆರ್‌ಆರ್‌ಆರ್ ಹಾಡಿನ ಹುಕ್ ಸ್ಟೆಪ್‌ಗಳನ್ನು ಮರುಸೃಷ್ಟಿಸುವುದನ್ನು ನಾವು ನೋಡಬಹುದು.

ಈ ತಿಂಗಳ ಆರಂಭದಲ್ಲಿ ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಡ್ಯಾನ್ಸ್ ರೀಲ್ ವೈರಲ್ ಆಗಿದೆ ಮತ್ತು ಸಾವಿರಾರು ಮಂದಿ ಇಷ್ಟ ಪಟ್ಟಿದ್ದಾರೆ. ನಿಮ್ಮ ಕಂಪೆನಿಯಲ್ಲಿ ಕೆಲಸ ಖಾಲಿ ಇದ್ದರೆ ಹೇಳಿ ಎಂದು ಹಲವರು ತಮಾಷೆಯ ಕಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ, RRRನ ನಾಟು ನಾಟು ಆಸ್ಕರ್ 2023 ರಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಇದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ರಿಹಾನ್ನಾ, ಲೇಡಿ ಗಾಗಾ ಮತ್ತು ಇತರ ಸಹ ನಾಮನಿರ್ದೇಶಿತರನ್ನು ಸೋಲಿಸಿ ಗೆದ್ದಿದೆ. ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್ ಟ್ರೋಫಿಯನ್ನು ಸ್ವೀಕರಿಸಿದರು.

https://youtu.be/oOb6YcFGXW0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read