ಮನುಷ್ಯರಿಗೆ ಪ್ರಾಣಕ್ಕಿಂತ ಕೆಲವೊಮ್ಮೆ ವಸ್ತುಗಳೇ ಮುಖ್ಯವಾಗಿ ಹೋಗ್ತವೆ. ಅಂಥದ್ದೊಂದು ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ರೈಲ್ವೆ ಫ್ಲಾಟ್ ಫಾರ್ಮ್ ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ವ್ಯಕ್ತಿಯೊಬ್ಬ ಪ್ರಾಣದ ಬಗ್ಗೆ ಚಿಂತಿಸದೇ ತನ್ನ ಚಪ್ಪಲಿ ಬಗ್ಗೆ ಗಮನ ಹರಿಸಿದ್ದಾನೆ. ಇದಕ್ಕಾಗಿ ಆತನಿಗೆ ರೈಲ್ವೆ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದಾರೆ.
ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿ, ಅಲ್ಲಿದ್ದ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ತ್ವರಿತ ಕ್ರಮದಿಂದ ಪ್ರಾಣ ಉಳಿಸಿಕೊಂಡಿದ್ದಾರೆ. ವಯಸ್ಸಾದವನಂತೆ ಕಾಣುವ ವ್ಯಕ್ತಿಯ ರೈಲ್ವೆ ಹಳಿ ದಾಟುವಾಗ ಒಂದು ಚಪ್ಪಲಿ ಕಳಚಿ ಬೀಳುತ್ತದೆ.
ಇದೇ ಸಮಯದಲ್ಲಿ ರೈಲು ಬರುತ್ತಿರುತ್ತದೆ. ಆದರೆ ವ್ಯಕ್ತಿ ತಕ್ಷಣ ರೈಲ್ವೆ ಹಳಿ ದಾಟದೇ ಹಳಿ ಮೇಲೆ ಬಿದ್ದ ತನ್ನ ಶೂ ಎತ್ತಿಕೊಂಡು ಪಕ್ಕಕ್ಕೆ ಹೋಗಿ ಮತ್ತೆ ಅದನ್ನು ಹಾಕಿಕೊಂಡು ರೈಲ್ವೆ ಹಳಿ ದಾಟಲು ಬರುತ್ತಾರೆ. ವ್ಯಕ್ತಿಯ ಈ ಚೇಷ್ಟೆಗಳನ್ನು ಗಮನಿಸಿದ ಆರ್‌ಪಿಎಫ್ ಅಧಿಕಾರಿಯೊಬ್ಬರು ಆತನ ಕೈ ಹಿಡಿದು ಮೇಲೆತ್ತಿಕೊಂಡು ಬಳಿಕ ಆತನಿಗೆ ಕಪಾಳ ಮೋಕ್ಷ ಮಾಡುತ್ತಾರೆ.
https://twitter.com/GabbbarSingh/status/1614175213004161024?ref_src=twsrc%5Etfw%7Ctwcamp%5Etweetembed%7Ctwterm%5E1614175213004161024%7Ctwgr%5E94b9f9c0893f86eba1d6b48926222780d80d1023%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-man-risks-his-life-to-cross-train-track-gets-slapped-by-rpf-officer-6842125.html