ಜಿಮ್ ನಲ್ಲಿ ಟ್ರೆಡ್ ಮಿಲ್ ಬಳಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಹೃದಯಾಘಾತ ಶಂಕೆ | VIDEO

ಗಾಜಿಯಾಬಾದ್: ಇತ್ತೀಚೆಗೆ ಜಿಮ್ ಗಳಲ್ಲಿ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದು ಹಲವಾರು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆ ನಡೆದಿವೆ.

ಈಗ, ಗಾಜಿಯಾಬಾದ್‌ನ ಜಿಮ್‌ ನಲ್ಲಿ ಟ್ರೆಡ್‌ ಮಿಲ್‌ ನಲ್ಲಿ ವರ್ಕೌಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಆತ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತಿಯಾಗಿದೆ.

X ಬಳಕೆದಾರ ಸಿರಾಜ್ ನೂರಾನಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಗಾಜಿಯಾಬಾದ್‌ನ ವೇವ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಮ್‌ನೊಳಗೆ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ವಿಮಾ ಏಜೆಂಟ್ ಸಾವನ್ನಪ್ಪಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೊದಲ್ಲಿ ವ್ಯಕ್ತಿ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದವರೊಬ್ಬರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್(CPR) ಮಾಡುವುದನ್ನು ಕಾಣಬಹುದು.

https://twitter.com/sirajnoorani/status/1819364826751140347

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read