Video | ಗುಟ್ಕಾ ಉಗಿಯಬೇಕು ವಿಮಾನದ ಕಿಟಕಿ ತೆರೆಯಿರಿ ಎಂದ ಪ್ರಯಾಣಿಕ

ವಿಮಾನದಲ್ಲಿ ಹಲವಾರು ಹಾಸ್ಯ ಪ್ರಸಂಗಗಳು ನಡೆಯುತ್ತವೆ. ಅಂಥವುಗಳ ಪೈಕಿ ಕೆಲವು ವೈರಲ್​ ಆಗುತ್ತಿವೆ. ಕೆಲವೊಂದು ಉದ್ದೇಶಪೂರ್ವಕವಾಗಿ ವಿಡಿಯೋ ಮಾಡುವ ಸಲುವಾಗಿ ಸೃಷ್ಟಿ ಮಾಡುವುದೂ ಇದೆ. ಈಗ ಇಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಇದು ಉದ್ದೇಶಪೂರ್ವಕವಾಗಿ ತಮಾಷೆಗಾಗಿ ಮಾಡಿರುವುದು ಎಂದು ನೋಡಿದರೆ ತಿಳಿಯುತ್ತದೆ.

ಈ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಗುಟಕಾ ಸೇವಿಸುವಂತೆ ಮಾಡಿದ್ದಾನೆ. ನಂತರ ಆತ ಏರ್​ ಹೋಸ್ಟೆಸ್​ ಅನ್ನು ಕರೆದು ಕಿಟಕಿ ತೆರೆಯುವಂತೆ ಕೇಳುತ್ತಾನೆ. ಇದರಿಂದ ಆಕೆ ಮೊದಲು ಗಲಿಬಿಲಿಗೊಳ್ಳುತ್ತಾಳೆ.

ನಂತರ ಏಕೆ ಎಂದು ವಿಚಾರಿಸಿದಾಗ ನನಗೆ ಗುಟ್ಕಾ ಉಗಿಯಬೇಕಿದೆ. ಆದ್ದರಿಂದ ಕಿಟಕಿ ಓಪನ್​ ಮಾಡಿ ಎಂದಿದ್ದಾನೆ. ಇದನ್ನು ಮೊದಲು ಆಕೆ ಗಂಭೀರವಾಗಿ ಪರಿಗಣಿಸಿದರೂ ನಂತರ ಇದು ತಮಾಷೆಯೆಂದು ತಿಳಿದು ಜೋರಾಗಿ ನಕ್ಕಿದ್ದಾರೆ.

Instagram ಬಳಕೆದಾರ ಗೋವಿಂದ್ ಶರ್ಮಾ ಅವರು “ನಿಮ್ಮ ಗುಟ್ಕಾ ಪ್ರೇಮಿ ಸ್ನೇಹಿತನನ್ನು ಟ್ಯಾಗ್ ಮಾಡಿ” ಎಂಬ ಸಂದೇಶದೊಂದಿಗೆ ಇದನ್ನು ಶೇರ್​ ಮಾಡಿದ್ದಾರೆ.

https://www.youtube.com/watch?v=4jxrzVAn8Fw

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read