ಯುವಕ – ಯುವತಿ ನಡುವಿನ ʼಸ್ಲೋ ಬೈಕ್‌ ರೇಸ್ʼ ನಲ್ಲಿ ಗೆದ್ದಿದ್ಯಾರು ? ವಿಡಿಯೋ ನೋಡಿ

ಇತ್ತೀಚಿನ ದಿನಗಳಲ್ಲಿ ಕೆಲವರು ಹಾಡಹಗಲೇ ನಡುರಸ್ತೆಯಲ್ಲಿ ವೀಲ್ಹಿಂಗ್‌ ಮಾಡುವ ಮೂಲಕ ಸ್ವತಃ ಆಪತ್ತು ತಂದುಕೊಳ್ಳುತ್ತಾರಲ್ಲದೇ ಇತರೆ ವಾಹನ ಸವಾರರಿಗೂ ಕಂಟಕಪ್ರಾಯರಾಗಿ ಪರಿಣಮಿಸುತ್ತಾರೆ. ಪೊಲೀಸರು ವೀಲ್ಹಿಂಗ್‌ ಮಾಡುವ ಪುಂಡರನ್ನು ಆಗಾಗ ಹಿಡಿದು ದಂಡ ವಿಧಿಸುತ್ತಿದ್ದರೂ ಈ ಪ್ರವೃತ್ತಿ ಕಡಿಮೆಯಾಗಿಲ್ಲ.

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಒಂದು ನೋಡುಗರಿಗೆ ಖುಷಿ ಕೊಟ್ಟಿದೆ. ಸ್ಲೋ ಬೈಕ್‌ ರೇಸ್‌ ನಲ್ಲಿ ಓರ್ವ ಯುವತಿ ಹಾಗೂ ಯುವಕನ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮವಾಗಿ ಗೆದ್ದವರು ಯಾರು ಎಂಬುದಕ್ಕೆ ಉತ್ತರ ವಿಡಿಯೋದಲ್ಲಿ ಸಿಗುತ್ತದೆ.

ವೀಡಿಯೋದಲ್ಲಿ ಯುವಕ ಮತ್ತು ಯುವತಿ ನಿಧಾನವಾಗಿ ಸ್ಕೂಟಿ ಮತ್ತು ಬೈಕ್‌ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ತಮಗೆ ನಿಗದಿಪಡಿಸಲಾದ ಟ್ರ್ಯಾಕ್‌ ನಲ್ಲಿ ಇವರುಗಳು ರೇಸಿಂಗ್ ಮಾಡುತ್ತಿದ್ದಾರೆ. ನೂರಾರು ಪ್ರೇಕ್ಷಕರು ಸ್ಥಳದಲ್ಲಿ ಜಮಾಯಿಸಿ ಇದನ್ನು ವೀಕ್ಷಿಸುತ್ತಿದ್ದು, ಸ್ಪರ್ಧಿಗಳಿಗೆ ಹುರಿದುಂಬಿಸುತ್ತಿದ್ದಾರೆ.

ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 2.5 ಮಿಲಿಯನ್ ವೀಕ್ಷಣೆಗಳನ್ನು ಮತ್ತು 44,000 ಲೈಕ್‌ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ ಹಲವಾರು ಜನರು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಮಹಿಳೆ ಮತ್ತು ಪುರುಷ ಇಬ್ಬರೂ ಬೇರೆ ಬೇರೆ ವಾಹನಗಳಲ್ಲಿ ಇದ್ದುದರಿಂದ ಇದು ನ್ಯಾಯಯುತ ಆಟವಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read