ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ.

ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ ಪಾಡಿಗೆ ತಾನು ದೋಣಿಯಡಿ ಸಾಗುತ್ತಿರುವುದನ್ನು ನೋಡಬಹುದಾಗಿದೆ. ದೋಣಿಯನ್ನು ಸುತ್ತುವರೆದಂತೆ ಕಾಣುವ ನೀಲಾಗಸದ ಹಿನ್ನೆಲೆಯು ಈ ವಿಡಿಯೋಗೆ ಇನ್ನಷ್ಟು ಮೆರುಗು ನೀಡಿದೆ.

ದೋಣಿಯಲ್ಲಿದ್ದ ಮೂರು ಜನರು ತಿಮಿಂಗಿಲವನ್ನು ಕಂಡ ಕೂಡಲೇ ಅದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದ್ದಾರೆ.

ದೋಣಿಯ ಕೆಳೆಗೆ ಹಾಯ್ದು ಹೋದ ಕೂಡಲೇ ಕಣಾರ್ಧದ ಮಟ್ಟಿಗೆ ಮೇಲೆ ಬಂದು ಮತ್ತೆ ನೀರಿನಾಳಕ್ಕೆ ಧುಮುಕುವುದನ್ನು ಸಹ ನೋಡಬಹುದಾಗಿದೆ. ಘಟನೆ ಸಂಭವಿಸಿದ ಸ್ಥಳದ ಕುರಿತು ಮಾಹಿತಿ ಸಿಕ್ಕಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕಣ್ಮನ ಸೆಳೆದಿದ್ದು, ಮೂರು ಲಕ್ಷ ವೀಕ್ಷಣೆಗಳು ಹಾಗೂ 11 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಿಟ್ಟಿಸಿದೆ.

https://youtu.be/yKF5GcvK6bs

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read