Video | ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿದ್ದ ತಿಂಡಿ ತಿಂದ ಪುಟ್ಟ ಮಗು; ಸಿಕ್ಕಿಬಿದ್ದಾಗ ಪ್ರತಿಕ್ರಿಯೆ ಸಖತ್ ಕ್ಯೂಟ್

ಮಕ್ಕಳಿಗೆ ಹಾಲು, ಅನ್ನ, ಸಾರಿಗಿಂತ ರುಚಿಕರವಾದ ತಿಂಡಿ ತಿನ್ನುವುದೇ ಇಷ್ಟ. ಮಕ್ಕಳ ಆಹಾರ ಬಿಟ್ಟು ಅವುಗಳು ಸಿಹಿಯಾದ, ಮಸಾಲೆಯುಕ್ತ ತಿಂಡಿ ತಿನ್ನಲು ಬಯಸುತ್ತವೆ. ಇದಕ್ಕಾಗಿ ಬೇರೆಯವರ ತಟ್ಟೆಗೆ ಕೈ ಹಾಕುವುದು ಅಥವಾ ಅಡುಗೆ ಪಾತ್ರೆಗೆ ಕೈ ಹಾಕುವುದು ಸಾಮಾನ್ಯ. ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪುಟ್ಟ ಮಗುವೊಂದು ರೆಫ್ರಿಜರೇಟರ್ ನಲ್ಲಿದ್ದ ತಿಂಡಿ ತಿನ್ನುವಾಗ ಸಿಕ್ಕಿಬಿದ್ದಿದ್ದು ಅದರ ಪ್ರತಿಕ್ರಿಯೆ ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದಿದೆ.

ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ವಿಡಿಯೋ ವೊಂದರಲ್ಲಿ ಅರ್ಧ ತೆರೆದ ಫ್ರಿಡ್ಜ್ ನ ಶೆಲ್ಫ್ ನಲ್ಲಿ ನಿಂತ ಹೆಣ್ಣು ಮಗು ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿ ಇಟ್ಟಿದ್ದ ದಾಲ್ಚಿನ್ನಿ ಬನ್ ಅನ್ನು ರಹಸ್ಯವಾಗಿ ತಿನ್ನುತ್ತಿರುತ್ತದೆ. ಈ ವೇಳೆ ಮಗುವಿನ ಅಮ್ಮ ಗಮನಿಸಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಗುವನ್ನ ಕೂಗಿದಾಗ ಮಗು ಬೆಚ್ಚಿಬಿದ್ದು ಸಿಕ್ಕಿಹಾಕಿಕೊಂಡು ಬಿಟ್ಟೆ ಎಂಬ ಭಯದಲ್ಲಿ ಕಣ್ಣನ್ನೂ ಅಲುಗಾಡಿಸದೇ ಹಾಗೆಯೇ ಪ್ರತಿಮೆಯಂತೆ ಫ್ರಿಡ್ಜ್ ನ ಶೆಲ್ಫ್ ಮೇಲೇ ನಿಂತುಬಿಡುತ್ತದೆ.

ಮಗುವಿನ ತೋಳಿನ ಮೇಲೆ ತಟ್ಟಿದರೂ ಪ್ರತಿಕ್ರಿಯಿಸುವುದಿಲ್ಲ. ಕೊನೆಗೆ ಕೆಳಗಿಳಿಯುವಂತೆ ಹೇಳಿದಾಗ ಮಗು ತನಗೇನೂ ಗೊತ್ತೇ ಇಲ್ಲವೇನೋ ಎಂಬಂತೆ ಫ್ರಿಡ್ಜ್ ನಿಂದ ಕೆಳಗಿಳಿಯುತ್ತದೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು ಮಗುವಿನ ಪ್ರತಿಕ್ರಿಯೆಯನ್ನು ತಮಾಷೆ ಮಾಡುತ್ತಾ ನಕ್ಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read