Video: ತಂಗಿಯನ್ನ ಕೀಟಲೆ ಮಾಡಿ ರೀಲ್ ಮಾಡಿದ ಕಿಲಿಪೌಲ್: ಅಣ್ಣ-ತಂಗಿಯ ಬಾಂಧವ್ಯಕ್ಕೆ ಮನಸೋತ ನೆಟ್ಟಿಗರು

ಇಂಟರ್‌ನೆಟ್‌ನಲ್ಲಿ ಸೆನ್ಸೆಶನ್ ಎಬ್ಬಿಸಿರುವ ಕಿಲಿಪೌಲ್ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲಿವುಡ್ ಹಾಡಿಗೆ ಡಾನ್ಸ್ ಮಾಡೋದು, ಇಂಡಿಯನ್ ಹಿಟ್ ಸಿನೆಮಾ ಡೈಲಾಗ್‌ಗೆ ಲಿಪ್‌ಸಿಂಕ್ ಮಾಡೋದ್ರಲ್ಲಿ ತಾಂಜೇನಿಯಾದ ಕಿಲಿಪೌಲ್ ಫೇಮಸ್.

ಇದೇ ಕಿಲಿಪೌಲ್ ಮಾಡೋ ರೀಲ್ಸ್ ಗೆ, ವಿಡಿಯೋಗೆ ಸಾಥ್ ಕೊಡೋದು ಸಹೋದರಿ ನೀಮಾ ಪೌಲ್. ಈಗ ಕಿಲಿಪೌಲ್ ಮತ್ತು ಈತನ ಸಹೋದರಿ ಮತ್ತೆ ಸುದ್ದಿಯಲ್ಲಿದ್ದಾರೆ.

ತಂಗಿ ನೀಮಾ ಪೌಲ್‌ಗೆ ಸದಾ ಕೀಟಲೆ ಕೊಡುವ, ಕಾಲು ಎಳೆಯುವ ಕಿಲಿಪೌಲ್ ಈ ಬಾರಿ ಮಾಡಿರುವ ವಿಡಿಯೋದಲ್ಲಿ ತಂಗಿಯ ಮೊಬೈಲ್ ಕಸಿದಿರುವುದನ್ನ ನೋಡಬಹುದಾಗಿದೆ.

ಅಸಲಿಗೆ ತಂಗಿಯನ್ನ ರೇಗಿಸುವುದರ ಜೊತೆ ಜೊತೆಗೆ, ಫೇಮಸ್ ಹಾಡು ‘ಕಾಮ್‌ಡೌನ್’ ಹಾಡಿಗೆ ಡಾನ್ಸ್ ಮಾಡುವುದು ಕಿಲಿಪೌಲ್ ಉದ್ದೇಶವಾಗಿತ್ತು. ಇದು ವಿಡಿಯೋಗಾಗಿ ಅನ್ನೋದು ಗೊತ್ತಾಗದ ನೀಮಾ ಪೌಲ್ ಒಂದೆರಡು ಕ್ಷಣ ಕನ್ನೂಸ್ ಆಗಿದ್ದಂತೂ ನಿಜ.

ನೈಜೀರಿಯನ್ ’ಕಾಮ್‌ಡೌನ್ ‘ ಹಾಡು ಸೂಪರ್ ಹಿಟ್ ಆಗಿದ್ದು, ಈ ಹಾಡಿಗೆ ಅನೇಕರು ಡಾನ್ಸ್ ಮಾಡಿ ಫೇಮಸ್ ಆಗಿದ್ದಾರೆ. ಈಗ ಇದೇ ಹಾಡಿಗೆ ಕಿಲಿಪೌಲ್ ಕೂಡಾ ಡಾನ್ಸ್ ಮಾಡಿರೋದನ್ನ ಇಲ್ಲಿ ನೋಡಬಹುದು. ಇನ್ಸ್ ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನ ಕಿಲಿಪೌಲ್ ಪೋಸ್ಟ್ ಮಾಡಿದ್ದು, ಈ ವಿಡಿಯೋ ಕೂಡಾ ಈಗ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಡಿಯೋ ಸಾವಿರಾರು ಲೈಕ್ ಗಳು ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಕಂಡುಕೊಂಡಿದೆ. ಅದರಲ್ಲೂ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

https://youtu.be/A2TGPlJCHbA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read