ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪಾಕ್​ ವ್ಯಕ್ತಿಯನ್ನು ವರಿಸಿದ ಭಾರತೀಯ ಮಹಿಳೆ !

ಫೇಸ್​​ಬುಕ್​ ಸ್ನೇಹಿತನಿಗಾಗಿ ಕಾನೂನು ಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ ಭಾರತೀಯ ಮಹಿಳೆಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ತನ್ನ ಎಫ್​​ಬಿ ಸ್ನೇಹಿತನನ್ನು ಮದುವೆಯಾಗಿದ್ದಾರೆ ಎಂದು ಪೊಲೀಸ್​ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಮನೆಯಲ್ಲಿ ತಂಗಿದ್ದಳು ಎನ್ನಲಾಗಿದೆ. 2019ರಲ್ಲಿ ಇವರಿಬ್ಬರು ಫೇಸ್​​ಬುಕ್​ ಮೂಲಕ ಪರಿಚಿತರಾಗಿದ್ದರು. ಇವರಿಬ್ಬರು ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಇವರಿಬ್ಬರ ನಿಕಾಹ್​ ನಡೆದಿದೆ ಎಂದು ಮೊಹರಾರ್​​​​ ನಗರ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ ಮೊಹಮ್ಮದ್​ ವಹಾಬ್​​​ ಮಾಹಿತಿ ನೀಡಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅಂಜು ತನ್ನ ಹೆಸರು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ ಎನ್ನಲಾಗಿದೆ.

ನಸ್ರುಲ್ಲಾ ಹಾಗೂ ಅಂಜು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಾದ ಬಳಿಕವೇ ಇವರ ನಿಕಾಹ್​ ನಡೆದಿದೆ ಎಂದು ಅಪ್ಪರ್​ ದಿರ್​ ಜಿಲ್ಲೆಯ ಮೊಹರಾರ್​ ನಗರ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ ಮೊಹಮ್ಮದ್​ ವಹಾಬ್​ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ನಸ್ರುಲ್ಲಾ ಕುಟುಂಬ ಸದಸ್ಯರು, ಪೊಲೀಸ್​ ಸಿಬ್ಬಂದಿ ಹಾಗೂ ವಕೀಲರ ಸಮ್ಮುಖದಲ್ಲಿ ದಿರ್​ ಬಾಲಾದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಲಕಂಡ್​ ವಿಭಾಗದ ಡೆಪ್ಯೂಟಿ ಇನ್​​ಸ್ಪೆಕ್ಟರ್​​​​ ಜನರಲ್​​ ನಾಸಿರ್​ ಮೆಹಮೂದ್​​ ಸತ್ತಿ ಕೂಡ ಈ ವಿಚಾರವಾಗಿ ಮಾತನಾಡಿದ್ದು ಅಂಜು ಹಾಗೂ ನಸ್ರುಲ್ಲಾ ನಿಕಾಹ್​ ಸಂಪನ್ನವಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಅಂಜು ಪಾಕ್​ ವ್ಯಕ್ತಿಯನ್ನು ವರಿಸಿದ್ದಾರೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read